ಕೊಹ್ಲಿ ಪ್ರಸ್ತುತ ಅತ್ಯುತ್ತಮ ಬ್ಯಾಟ್ಸ್ಮನ್: ಪಾಂಟಿಂಗ್


ಮೆಲ್ಬೋರ್ನ(ಆಸ್ಟ್ರೇಲಿಯಾ): ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಆಡುತ್ತಿಲ್ಲ, ಹೀಗಾಗಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿದ್ದಾರೆ ಎಂದು ಆಸೀಸ್ ನ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.  

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಿದ್ದರು ರಿಕಿ ಪಾಂಟಿಂಗ್ ಮಾತ್ರ ಕೊಹ್ಲಿ ಪ್ರಸ್ತುತ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಲು ಸ್ಟೀವನ್ ಸ್ಮಿತ್ ನಿಷೇಧದಲ್ಲಿರುವುದೇ ಕಾರಣ ಎಂದು ಹೇಳಿದ್ದಾರೆ.  

ಪ್ರಸ್ತುತ ಸ್ಟೀವನ್ ಸ್ಮಿತ್ ಆಡುತ್ತಿದ್ದರೆ ಆತನೆ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿರುತ್ತಿದ್ದರು. ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಹಲವು ಸರಣಿಗಳನ್ನು ಗೆದ್ದಿತ್ತು. ಮುಖ್ಯವಾಗಿ ಆ್ಯಷಸ್ ಸರಣಿ ಕೊಹ್ಲಿಗಿಂತ ಸ್ಮಿತ್ ಉತ್ತಮ ಬ್ಯಾಟ್ಸ್ ಮನ್ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.  ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ 53.40ರ ಬ್ಯಾಟಿಂಗ್ ಸರಾಸರಿಯಲ್ಲಿ 21 ಶತಕ ಸಿಡಿಸಿದ್ದರೆ, ಸ್ಟೀವನ್ ಸ್ಮಿತ್ 61.37 ಬ್ಯಾಟಿಂಗ್ ಸರಾಸರಿಯಲ್ಲಿ 23 ಶತಕ ಸಿಡಿಸಿದ್ದಾರೆ. ಈ ಅಂಕಿಅಂಶಗಳನ್ನಿಟ್ಟುಕೊಂಡು ಪಾಂಟಿಂಗ್ ಸ್ಮಿತ್ ಅತ್ಯುತ್ತಮ ಬ್ಯಾಟ್ಸ್ ಮನ್ ಎಂದು 

ಹೇಳುತ್ತಿದ್ದಾರೆ.