ಶಿಶುನಾಳ ಶರೀಫರ ತತ್ವಪದ ಗಾಯನ ಕಾರ್ಯಕ್ರಮ


ಧಾರವಾಡ 04: ಕನರ್ಾಟಕ ವಿದ್ಯಾವರ್ಧಕ ಸಂಘ ಮತ್ತು ಜಾನಪದ ಸಂಶೋಧನಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂತ ಶಿಶುನಾಳ ಶರೀಫ ಜಯಂತಿ ಆಚರಣೆ-2018' ಮತ್ತು 'ಶರೀಫರ ತತ್ವಪದಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಅವರು ಮಾತನಾಡಿದರು.

 ಕನರ್ಾಟಕದ ಕಬೀರ ಎಂದು ಹೆಸರಾದ ಶಿಶುವಿನಹಾಳದ ಸಂತ ಶರೀಫರ ತತ್ವಪದಗಳು ನಾಡಿನಲ್ಲಿ ಭಾವೈಕ್ಯತೆಯನ್ನು ಬೆಳೆಸಿವೆ. ಅವರ ಸತ್ವಪೂರ್ಣ ತತ್ವಪದಗಳು ಯಾವುದೇ ಜಾತಿಗೆ ಮೀಸಲಾಗಿಲ್ಲ. ಸಮಾಜದಲ್ಲಿಯ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅವರ ಈ ತತ್ವಪದಗಳು ನಮಗೆ ದಾರಿದೀಪಗಳಾಗಿವೆ. ಶಿಶುನಾಳ ಶರೀಫರಂಥ ಮಹಾಮಹೀಮರ ತತ್ವ ಆದರ್ಶಗಳನ್ನು, ಅವರ ಹಾಡುಗಳನ್ನು ಕೇಳುವುದೇ ಒಂದು ಭಾಗ್ಯವಾಗಿದೆ. ಅವುಗಳಿಂದ ನಮ್ಮ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ. ಇಂದಿನ ಯುವಜನಾಂಗ ಹಿರಿಯರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಶಕ್ತಿಶಾಲಿ ಸಮಾಜವನ್ನು ಕಟ್ಟುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು. 

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾನೂನು ತಜ್ಞ ಡಾ. ಲೋಹಿತ ನಾಯ್ಕರ ಮಾತನಾಡಿ, ಸಮಾಜವನ್ನು ತಿದ್ದಿ, ಸುಧಾರಿಸಿ, ಶುದ್ಧಿಕರಿಸಿ ಸಮಾಜವನ್ನು ಒಳ್ಳೆಯ ಹಾದಿಗೆ ತಂದ ಶಿಶುನಾಳ ಶರೀಫರು ಮಹಾನ್ ವ್ಯಕ್ತಿಗಳಾಗಿದ್ದಾರೆ.  ಸಮಾಜದಲ್ಲಿ ನಡೆಯುತ್ತಿರುವ ಹೀನಾಯ ಕೃತ್ಯಗಳು, ದೌರ್ಜನ್ಯಗಳು, ಮೂಢನಂಬಿಕೆಗಳು, ಮಹಿಳೆಯರ ಮೇಲೆ ಅತ್ಯಾಚಾರ ಆಗುವುದನ್ನು ನಾವು ಕೇಳುತ್ತಿದೇವೆ. ಇವುಗಳನ್ನು ಕಾನೂನಿಂದ ಮಾತ್ರ ತಿದ್ದಲು ಸಾಧ್ಯವಿಲ್ಲ. ಅಭಿವೃದ್ಧಿ ಎಂದರೆ ಬಾಹ್ಯವಾದದ್ದು ಅಲ್ಲ. ನಮ್ಮಲ್ಲಿಯ ಒಳ್ಳೆಯ ಗುಣಗಳು ಸಮೃದ್ಧಿಯಾಗಿ ಹೊರಹೊಮ್ಮಬೇಕಾಗಿದೆ ಎಂದರು. 

ಮತ್ತೊಬ್ಬ ಅತಿಥಿ ಕ.ವಿ.ವ. ಸಂಘದ ಕೋಶಾಧ್ಯಕ್ಷ ಹಾಗೂ ಗೋವಿಂದ ಭಟ್ಟರ ವಂಶಸ್ಥ ಕೃಷ್ಣ ಜೋಶಿ ಮಾತನಾಡಿ, ಜಾತೀಯತೆ ಬಲಾಢ್ಯವಾದ ಸನ್ನಿವೇಶದಲ್ಲಿ ಮುಸಲ್ಮಾನ ಧರ್ಮದ ಶರೀಫರನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಬಹು ಹಿಂದೆಯೇ ಭಾವೈಕ್ಯದ ಸಂದೇಶವನ್ನು ಸಾರಿದ್ದ ಗೋವಿಂದ ಭಟ್ಟರು ಬಹು ದೊಡ್ಡ ಸಮಾಜ ಸುಧಾರಕರಾಗಿದ್ದರು ಎಂದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿದರ್ೇಶಕರಾದ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿ, ಶರೀಫರು ಮತ್ತು ಗೋವಿಂದ ಭಟ್ಟರು ಸರ್ವಧರ್ಮಗಳ ಶಾಂತಿಯ ತೋಟದ ಕನಸನ್ನು ಕಂಡಿದ್ದರು. ಆಧ್ಯಾತ್ಮದ ಅದ್ಭುತವಾದ ಸಾಧನೆಯನ್ನುಳ್ಳ ಅವರ ತತ್ವಪದಗಳು ನಮಗೆ ಮಾರ್ಗದಶರ್ಿಯಾಗಿವೆ ಎಂದರು. ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ, ಖ್ಯಾತ ಜಾನಪದ ವಿದ್ವಾಂಸ ಬಸವಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ, ಭಾಷಣವನ್ನು ಮಾಡದೇ ಹಾಡುಗಳ ಮೂಲಕ ಅಧ್ಯಕ್ಷೀಯ ಸಮಾರೋಪ ಮಾಡಿ, ಒಂದು ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದರು. ಪ್ರಕಾಶ ಕಂಬಳಿ, ಪ್ರಭು ಕುಂದರಗಿ, ಜಿ.ಟಿ.ದೊಡಮನಿ, ಕು. ಮೈತ್ರಾ ಭಜಂತ್ರಿ, ಸುನಂದಾ ನಿಂಬನಗೌಡರ, ವಲೆಪ್ಪನವರ, ಆಶಾ ಸೈಯ್ಯದ, ಖೈರುನ್ನಿಸಾ ತಂಡದವರು ಹಾಗೂ ಡಾ. ಪ್ರಭಾ ನೀರಲಗಿ ಮತ್ತು ತಂಡದವರು ಸಂತ ಶಿಶುನಾಳ ಶರೀಫರ ಪ್ರಸಿದ್ಧ ಗೀತೆಗಳಾದ ಕೋಡಗನ ಕೋಳಿ ನುಂಗಿತ್ತ.. ಸುಳ್ಳೇ ಸುಳ್ಳು ಸಂಸಾರದಾಟ.. ಬರಕೋ ಪದ ಬರಕೋ.. ಹುಟ್ಟಿದ್ದು ಹೊಲೆಮನಿ.. ಕುಂಬಾರಕಿ ಈಕಿ ಕುಂಬಾರಕಿ .. ಮುಂತಾದ ತತ್ವಪದಗಳನ್ನು ಪ್ರಸ್ತುತ ಪಡಿಸಿ, ನೆರೆದ ಸಭಿಕರನ್ನು ಸಂಗೀತದ ಅಲೆಯಲ್ಲಿ ತೇಲಿಸಿದರು. ಹಾರ್ಮೋನಿಯಂ ಮತ್ತು ತಬಲಾದಲ್ಲಿ ನಾಗರಾಜ ಕಮ್ಮಾರ, ಉಮೇಶ ಹಾಗೂ ಸುರೇಶ ನಿಡಗುಂದಿ ಸಾಥ್ ನೀಡಿದರು. ಸುಜಾತಾ ಹಡಗಲಿ ಮತ್ತು ಜಯಶ್ರೀ ಗೌಳಿಯವರ ಕಲಾವಿದರನ್ನು ಪರಿಚಯಿಸಿದರು.  

ಗಾಯತ್ರಿ ಕುಲಕಣರ್ಿ ಅವರಿಂದ ಪ್ರಾರ್ಥನೆ, ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ, ಹೇಮಾಕ್ಷಿ ಕಿರೇಸೂರ, ನಾಗಭೂಷಣ ಹಿರೇಮಠ, ಮಹೇಶ ಕುಲಕಣರ್ಿ ಅತಿಥಿಗಳಿಗೆ ಪುಷ್ಪ ನೀಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವೇಶ್ವರಿ ಹಿರೇಮಠ, ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ ಪಾಟೀಲ, ಎಸ್.ಬಿ. ಗಾಮನಗಟ್ಟಿ, ಹಾಗೂ ವತ್ಸಲಾ ಕುಲಕಣರ್ಿ, ಸಿ.ಬಿ.ಹೊಸಕೋಟಿ, ಯಕ್ಕೆರಪ್ಪ ನಡುವಿನಮನಿ, ಫಕ್ಕಿರಪ್ಪಾ ಮುರಕಟ್ಟಿ, ಕಲಾವತಿ ಹೂಗಾರ, ಸುಮಾ ಗಿರಡ್ಡಿ, ವಿದ್ಯಾ ಜಮಖಂಡಿ, ಶಶಿಕಲಾ ಶಾಸ್ತ್ರಿಮಠ, ತಾರಾದೇವಿ ವಾಲಿ, ಜಯಲಕ್ಷ್ಮೀ ಉಮಚಗಿ, ರತ್ನಾ ಗಂಗಣ್ಣವರ, ಹೇಮಾ ಕಿರೇಸೂರ, ಲತಾ ಮಂಟಾ, ವಿಜಯಾ ಲಿಂಬಣ್ಣದೇವರಮಠ, ವಿಜಯಾ ದಢೂತಿ, ಕೋಮಲಾ ಕೋತಂಬ್ರಿ ಮುಕ್ತಾ ಸವಡಿ, ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.