ಪಡಗಾನೂರ ಪೋಸ್ಟಮನ್-ಪೋಸ್ಟಮಾಸ್ಟರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲೆಗೆ ಆದೇಶ


ವಿಜಯಪುರ:07 ಸಿಂದಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಪಿಂಚಣಿ ನೀಡದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪಡಗಾನೂರ ಗ್ರಾಮದ ಪೋಸ್ಟಮನ್ ಹಾಗೂ ಪೋಸ್ಟ ಮಾಸ್ಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಅವರು ಸಿಂದಗಿ ತಹಶೀಲ್ಖಾರ ಅವರಿಗೆ ಆದೇಶ ನೀಡಿದ್ದಾರೆ.

ಸಿಂದಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಫಲನಾನುಭವಿಗಳಿಗೆ ಪೋಸ್ಟಮನ್ ಅವರು ಪ್ರತಿ ತಿಂಗಳು ಪಿಂಚಣಿ ನೀಡದೆ ವರ್ಷಕ್ಕೆ ನಾಲ್ಕು ಬಾರಿ ಮಾತ್ರ ಪಿಂಚಣಿ ಕೊಡುತ್ತಿರುವುದಾಗಿ ಗ್ರಾಮಸ್ಥರು ನೀಡಿದ ದೂರಿನನ್ವಯ ಸಾಮಾಜಿಕಾ ಭದ್ರತಾ ಯೋಜನೆಯ ಸಹಾಯಕ ನಿದರ್ೆಶಕರು ಗ್ರಾಮಕ್ಕೆ ಭೇಟಿ ವಿಚಾರನೆ ಮಾಡಿ ದೂರು ನಿಜ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ಮೇಲಿನಂತೆ ಜಿಲ್ಲಾಧಿಕಾರಿಗಳು ಕ್ರಿಮಿನಲ್ ಮೊಕದ್ದಮೆಯನ್ನು ಪೋಸ್ಟಮನ್ ಹಾಗೂ ಪೋಸ್ಟ ಮಾಸ್ಚರ್ ವಿರುದ್ಧ ದಾಖಲಿಸುವಂತೆ ಆದೇಶ ನೀಡಿದ್ದಾರೆ