ಅಪಾಯಕ್ಕೆ ಆವ್ಹಾನಿಸುತ್ತಿರುವ ತೆರೆದ ಕೊಳವೆ ಬಾವಿ ವಿರುದ್ಧ ಸಾರ್ವಜನಿಕರ ಆಕ್ರೋಶthe public's against

ಲೋಕದರ್ಶನ ಸುದ್ದಿ

ಯಲಬುಗರ್ಾ: ಪಟ್ಟಣದ 1ನೇ ವಾಡರ್ಿನ ರುದ್ರಭಾವಿ ಹನುಮಂತ ದೇವರ ದೇವಸ್ಥಾನದ ಪಕ್ಕದಲ್ಲಿ ಪಪಂನಿಂದ ಕೊರೆಸಲಾದ ಕೊಳವೆ ಬಾವಿಯನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಇದರಿಂದ ಅಪಾಯದ ವಾತಾವರಣ ಸ್ಥಳೀಯ ನಿವಾಸಿಗಳಲ್ಲಿ ಮನೆ ಮಾಡಿದೆ. 

ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೆ ದೇವಸ್ಥಾನದ ಪಕ್ಕದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಅಂತರ್ಜಲ ಲಭ್ಯವಾಗದ ಕಾರಣ ಬಾವಿ ಸದ್ಯ ನಿರುಪಯುಕ್ತಗೊಂಡಿದೆ. ಕೊಳವೆ ಬಾವಿಯನ್ನು ಪಪಂ ಅಧಿಕಾರಿ, ಸಿಬ್ಬಂದಿಗಳು ಮುಚ್ಚದೇ ಹಾಗೇ ಬಿಟ್ಟಿದ್ದಾರೆ. ಸಣ್ಣ ಸಣ್ಣ ಮಕ್ಕಳು ದೇವಸ್ಥಾನದ ಹತ್ತಿರ ಆಟವಾಡಲು ಆಗಮಿಸುತ್ತಾರೆ. ತೆರೆದ ಕೊಳವೆ ಬಾವಿ ಹಾಗೇ ಬಿಟ್ಟಿರುವುದರಿಂದ ಪಾಲಕರಲ್ಲಿ ಭಯದ ಆತಂಕ ಮನೆ ಮಾಡಿದೆ. ಈ ಬಗ್ಗೆ ಹಲವು ಭಾರಿ ಪಪಂ ಅಧಿಕಾರಿ, ಸಿಬ್ಬಂದಿಗಳ ಗಮನಕ್ಕೆ ತರಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂಬುದು ನಿವಾಸಿಗಳು ಆರೋಪಿಸಿದ್ದಾರೆ. 

ಒತ್ತಾಯ: ಸಣ್ಣ ಮಕ್ಕಳ ಹಿತ ದೃಷ್ಠಿಯಿಂದ ದೇವಸ್ಥಾನ ಹಾಗೂ ಕೆಂಪು ಕೆರೆಗೆ ತೆರಳುವ ರಸ್ತೆಗೆ ಹೊಂದಿಕೊಂಡ ತೆರೆದ ಕೊಳವೆ ಬಾವಿಗಳನ್ನು ಪಪಂ ಅಧಿಕಾರಿ, ಸಿಬ್ಬಂದಿಗಳು ಮುಚ್ಚಲು ಮುಂದಾಬೇಕು ಎಂದು ಸ್ಥಳೀಯ ನಿವಾಸಿಗಳಾದ ಗವಿಸಿದ್ಧಯ್ಯ ಗವಿಮಠ, ವೀರನಗೌಡ ಹೊಸಳ್ಳಿ, ಕಳಕಪ್ಪ ತಳವಾರ, ಹನುಮಂತಪ್ಪ ಎಮ್ಮಿಗುಡ್ಡದ್, ಸುರೇಶ ಕಮ್ಮಾರ, ಕಲ್ಲಪ್ಪ ಸಿಂಪರ್, ಮಲ್ಲಪ್ಪ ಸುರಕೋಡ ಇತರರು ಒತ್ತಾಯಿಸಿದ್ದಾರೆ.