ಗದಗ11: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿಮರ್ಾಣಕ್ಕೆ ಜಾಗದ ಕೊರತೆಯಿರುವ ಸಂದರ್ಭದಲ್ಲಿ ಅವುಗಳ ಸ್ಥಳ ಬದಲಾವಣೆಗೆ ಸಕರ್ಾರಕ್ಕೆ ಪ್ರಸ್ತಾವನೆಯನ್ನು ತಕ್ಷಣ ಕಳುಹಿಸಬೇಕು ಹಾಗೂ ಅನಧಿಕೃತವಾಗಿ ಗೈರು ಹಾಜರಾಗುವ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ಅಂಗನವಾಡಿ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಲು ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ನಿದರ್ೇಶನ ನೀಡಿದರು. ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ನ್ಯೂಟ್ರಿಷನ್ ಪ್ರೋಗ್ರಾಮ್ನಲ್ಲಿ ಖಚರ್ಾಗದೇ ಬಾಕಿ ಉಳಿದ ಹಣವನ್ನು ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಹಾಗೂ ದುರಸ್ತಿಗೆ ಬಳಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 1164 ಅಂಗನವಾಡಿ ಕಟ್ಟಡಗಳಿದ್ದು 330 ದುರಸ್ತಿಯಾಗಿವೆ. 369 ಅಂಗನವಾಡಿ ಗಳಿಗೆ ಶೌಚಾಲಯ ಮಂಜೂರಾಗಿದ್ದು 220 ಶೌಚಾಲಯ ನಿಮರ್ಾಣವಾಗಿವೆ 53 ಅಂಗನವಾಡಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ ಸಭೆಗೆ ತಿಳಿಸಿದರು.
ಹಲರ್ಾಪುರ ಕೆರೆ ಹೂಳೆತ್ತುವ ಕಾಮಗಾರಿ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರುಗಳು ಜಂಟಿಯಾಗಿ ವೀಕ್ಷಣೆ ನಡೆಸಿ ವರದಿಯನ್ನು ನೀಡಬೇಕು ಹಾಗೂ 2017-18 ನೇ ಸಾಲಿಗೆ ಕೆರೆ ನಿರ್ವಹಣೆಗಾಗಿ ಬಿಡುಗಡೆಯಾಗಿರುವ ಹಾಗೂ ಖಚರ್ಾಗಿರುವ ಅನುದಾನದ ವಿವರವನ್ನು ನೀಡಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ತಿಳಿಸಿದರು. ಜಿ.ಪಂ. ಸಾಮಾನ್ಯ ಸಭೆಗೆ ಕಡ್ಡಾಯವಾಗಿ ಇಲಾಖೆಯ ಅಧಿಕಾರಿಗಳು ಹಾಜರಾಗಬೇಕು. ಪೂವರ್ಾನುಮತಿ ಇಲ್ಲದೇ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಾಸಣ್ಣ ಕುರಡಗಿ ನುಡಿದರು.
2017-18 ನೇ ಸಾಲಿನ ಹಂಚಿಕೆಯಾದ 9700 ತಾಡಪತ್ರಿಗಳನ್ನು ಜಿಲ್ಲೆಯ ರೈತರಿಗೆ ವಿತರಣೆ ಮಾಡಲಾಗಿದೆ. 2018-19 ನೇ ಸಾಲಿಗೆ 13840 ತಾಡಪತ್ರಿಗಳನ್ನು ಇಲಾಖಾ ಅನುದಾನ ಬಿಡುಗಡೆ ಆಧರಿಸಿ ಸಮರ್ಪಕ ವಿತರಣೆಗೆ ವ್ಯವಸ್ಥೆಗೆ ಮಾಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿದರ್ೇಶಕ ಸಿ.ಬಿ. ಬಾಲರೆಡ್ಡಿ ಸಭೆಗೆ ತಿಳಿಸಿದರು.
ಶಿಗ್ಲಿಯಲ್ಲಿ ಚೆಕ್ ಡ್ಯಾಂ ಕಾಮಗಾರಿ, ಸಹಕಾರ ಇಲಾಖೆಯ ಲೆಕ್ಕ ಪರಿಶೋಧನೆ ವರದಿ, ಮೇಗೂರು-ಶಿರೋಳ ರಸ್ತೆ ನಡುವೆ ಸಿ.ಡಿ. ಕಾಮಗಾರಿ, ರೋಣ ತಾಲೂಕಿನ ಮುಗಳಿ ಗ್ರಾಮದ ಬಾಬು ಜಗಜೀವನ ರಾಮ ಭವನ ಕಟ್ಟಡ ಕಾಮಗಾರಿ ಪ್ರಗತಿ, ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಲಾದ ಕೊಳವೆ ಭಾವಿಗಳ ವಿವರ, ಪಶು ಸಂಗೋಪನಾ ಇಲಾಖೆಯಿಂದ ಕೋಳಿ ವಿತರಣೆ ಹಾಗೂ ವಿವಿಧ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಚಚರ್ಿಸಲಾಯಿತು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ರೂಪಾ ಅಂಗಡಿ, ಜಿ.ಪಂ. ಸದಸ್ಯರುಗಳಾದ ಮಂಜುಳಾ ಹುಲ್ಲಣ್ಣವರ, ರಾಜುಗೌಡ ಕೆಂಚನಗೌಡ್ರ, ಶಿವಲಿಂಗಪ್ಪ ಬಳಿಗಾರ, ಸಿದ್ಧು ಪಾಟೀಲ, ಶಕುಂತಲಾ ಮೂಲಿಮನಿ, ಶಕುಂತಲಾ ಚವ್ಹಾಣ, ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.