'ಡಿಕೆಶಿಗೆ ಮತ್ತೆ ನೋಟೀಸಿನ ಹಿಂದೆ ದುರುದ್ದೇಶ ಇದೆ'

ನವದೆಹಲಿ 16, ಈಗಾಗಲೇ ಸ್ಪಷ್ಟೀಕರಣ ನೀಡಿದ್ದರೂ ಜಾರಿ ನಿದರ್ೆಶನಾಲಯ (ಇಡಿ) ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ನೋಟಿಸ್ ನೀಡಿರುವುದರ ಹಿಂದೆ ದುರುದ್ದೇಶವಿದೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ. ಅವರು ನೀಡಿದ ನೋಟಿಸ್ಗೆ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ  ಉತ್ತರ ನೀಡಿದ್ದಾರೆ. ಮತ್ತೆ ನೋಟಿಸ್ ನೀಡಿ ತ್ವರಿತವಾಗಿ ಸ್ಪಷ್ಟೀಕರಣ ನೀಡಿ ಎಂದು ಹೇಳಿರುವುದರ ಹಿಂದೆ ದುರುದ್ದೇಶವಿದೆ. ಕೇಂದ್ರ ಸಕರ್ಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ ಎಂದ ಅವರು ತಿಳಿಸಿದರು.

ರಾಜ್ಯದ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಹತಾಶೆಯಾಗಿದೆ. ಬಳ್ಳಾರಿಯಲ್ಲಿ ಎರಡೂವರೆ ಲಕ್ಷ ಅಧಿಕ ಮತಗಳಿಂದ ನಾನು ಜಯಗಳಿಸಿದ್ದೇನೆ. ಯಡಿಯೂರಪ್ಪನವರು ನಾಲ್ಕು ಲಕ್ಷ ಮತಗಳಿಂದ ಗೆದಿದ್ದರು. ಈಗ ಅವರ ಪುತ್ರನ ಗೆಲುವಿನ ಅಂತರ 50ಸಾವಿರಕ್ಕಿಳಿದಿದೆ. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ಹೇಳಿದರು.

ದ್ವೇಷದ ರಾಜಕಾರಣದಿಂದ ಒಳ್ಳೆಯ ಹೆಸರು ಬರುವುದಿಲ್ಲ. ಅಪರಾಧವೆಸಗಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂದರು.