ಶ್ರೀಧರ್ ಹೆಚ್ ನಾಯ್ಕ ಅವರಿಗೆ ಪಿ.ಹೆಚ್‌. ಡಿ. ಪದವಿ ಪ್ರದಾನ

Sridhar H Nayak awarded Ph.D. degree

ರಾಣೇಬೆನ್ನೂರು 07 : ಹಾವೇರಿಯ ಸರ್ಕಾರಿ ತಾಂತ್ರಿಕ( ವಿದ್ಯುನ್ಮಾನ ಹಾಗೂ ಸಂಹನ ವಿಭಾಗ) ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ: ಶ್ರೀಧರ್ ಹೆಚ್‌. ಪಿ.ಹೆಚ್‌.ಡಿ. ಪದವಿಗೆ ಭಾಜನರಾಗಿದ್ದಾರೆ. ಡಾ: ಶ್ರೀಧರ್, ಬೆಂಗಳೂರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಡಾ. ಸುನೀಲ ಎಸ್‌.ಹರಕಣ್ಣನವರ, ಅವರ ಮಾರ್ಗದರ್ಶನದಲ್ಲಿ, " ಡೆವಲಪ್ಪಮೆಂಟ್ ಆಪ್ ಎ ರೂಬೂಟ್ " ಅಲಗೋರಿಧಮ್ ಫಾರ್ ಇಮೇಜ್‌/ ವಿಡಿಯೋ ಮೂಸೈಕಿಂಗ್  ವಿಷಯದ ಮೇಲೆ ತಮ್ಮ ಮಹಾ  ಪ್ರಬಂಧವನ್ನು ಮಂಡಿಸಿದ್ದರು.ಡಾ. ಶ್ರೀಧರ್ ಹೆಚ್‌. ಅವರಿಗೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು, ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಿದೆ.