2ನೇ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಹೇಮಾ ಅಂಗಡಿ ಆಯ್ಕೆ

Hema Angadi selected in 2nd International Yogasana Competition

ರಾಣೇಬೆನ್ನೂರು 07 : ನಗರದ  ಹೇಮಾ ರವೀಂದ್ರಕುಮಾರ ಅಂಗಡಿ ಅವರು ವಿಯಟ್ನಾಂ ದೇಶದಲ್ಲಿ ನಡೆಯುತ್ತಿರುವ 2ನೇ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ. ಹೇಮಾ ರವೀಂದ್ರಕುಮಾರ ಅಂಗಡಿ  ಕಳೆದ 15 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಈವರೆಗೆ ರಾಜ್ಯ. ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಯೋಗಾಸನ ಸ್ಪರ್ದೆಯಲ್ಲಿ ಸಾಧನೆ ಮಾಡಿದ್ದಾರೆ. ಈ ಎರಡನೇ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿಯು ಭಾಗವಹಿಸಿ ಜಯಶಾಲಿಯಾಗಿ ಬರಲಿ ಎಂದು ಕುಟುಬಂಸ್ಥರು ಹಾಗೂ ಕ್ರೀಡಾಭಿಮಾನಿಗಳು  ಶುಭ ಕೊರಿದ್ದಾರೆ.