ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಿಎಂ ನರೇಂದ್ರ ಮೋದಿ ಸಿನಿಮಾ ವಿಡಿಯೋಗಳಿಗೆ ಬಿಡುಗಡೆಗೆ ನಿಷೇಧ ಹೇರುವಂತೆ ಕೋರಿ ಕಾಂಗ್ರೆಸ್ ಮುಖಂಡರು ಸಲ್ಲಿಸಿರುವ ಅರ್ಜಿ ಕುರಿತು ಏ.8ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.

ನವದೆಹಲಿ ೦೩: ಕಾಂಗ್ರೆಸ್ ವಕ್ತಾರ ಅಮನ್ ಪನ್ವರ್ ಈ ಸಂಬಂಧ ಸುಪ್ರೀಂಕೋರ್ಟ್ ಅರ್ಜಿ  ಸಲ್ಲಿಸಿ ನಟ ವಿವೇಕ್ ಓಬೀರಾಯ್ ನಟಿಸಿರುವ ಪ್ರಧಾನಿ ಜೀವನ ಕುರಿತ ಚಿತ್ರ ಬಿಡುಗಡೆಯಾದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಯಾಗಲಿದೆ ಎಂದು ವಾದಿಸಿದ್ದರು.

ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  ಹಿರಿಯ ನ್ಯಾಯಮೂರ್ತಿ  ಎಸ್.ಎ.ಬೋಬ್ಡೆ ನೇತೃತ್ವದ ಪೀಠ ಈ ಅಜರ್ಿ ವಿಚಾರಣೆಯನ್ನು ಸೋಮವಾರ (ಏ.8) ಕೈಗೆತ್ತಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕರ ಪರ ವಕೀಲ ಎ.ಎಂ.ಸಿಂಘ್ವಿ ಅವರಿಗೆ ತಿಳಿಸಿದರು.

ಇದಕ್ಕೂ ಮುನ್ನ ಸಿಂಘ್ವಿ ಅವರು ಅರ್ಜಿ  ಕುರಿತು ಪ್ರಸ್ತಾಪಿಸಿ ದೇಶದ ಕೆಲವು ನ್ಯಾಯಾಲಯಗಳು ಪಿಎಂ ನರೇಂದ್ರ ಮೋದಿ ಸಿನಿಮಾ ನಿಷೇಧ ಕುರಿತು ಮಧ್ಯ ಪ್ರವೇಶಿಸಲು ನಿರಾಕರಿಸಿವೆ. ಹೀಗಾಗಿ ನಮ್ಮ ಅರ್ಜಿ ಯನ್ನು  ಕೂಡಲೇ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.

ಏ.5ರಂದು ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ವಿವಾದಗಳು ಭುಗಿಲೆದ್ದಿರುವ ಕಾರಣ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಏ.8ರಂದು ಸುಪ್ರೀಂಕೋರ್ಟ್ ನಲ್ಲಿ  ಈ ಚಿತ್ರದ ಬಿಡುಗಡೆ ಭವಿಷ್ಯ ನಿರ್ಧಾರವಾಗಲಿದೆ .