ಕೈಗಾದ ಪರೇಡ್ ಸಂಭ್ರಮ

ಕೈಗಾದ ಪರೇಡ್ ಸಂಭ್ರಮ The parade that took place was a celebration

ಲೋಕದರ್ಶನ ವರದಿ 

ಕಾರವಾರ, ಮಾ.10 :- ಎನ್‌ಪಿಸಿಐಎಲ್ ಕೈಗಾದ ಕೇಂದ್ರೀಯ ಓದ್ಯೋಗಿಕ ಸುರಕ್ಷಾ ಬಲದ ಘಟಕದಲ್ಲಿ ಕೇಂದ್ರೀಯ ಓದ್ಯೋಗಿಕ ಸುರಕ್ಷಾ ಬಲದ 57ನೇ ಸ್ಥಾಪನಾ ದಿವಸ ಕಾರ್ಯಕ್ರಮವನ್ನು ಮೂಲಕ ಪರೇಡ್ ನಡೆಸುವ ಮೂಲಕ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು. ಕೈಗಾದ ಸ್ಥಳ ನಿರ್ದೇಶಕ ಬಿ. ವಿನೋದಕುಮಾರ, ಕೈಗಾ ಉತ್ಪಾದನಾ ಕೇಂದ್ರ 1 ಮತ್ತು 2ರ ಕೇಂದ್ರ ನಿರ್ದೇಶಕ ಕೆ. ಶ್ರೀರಾಮ, ಕೈಗಾ 5 ಮತ್ತು 6 ರ ಯೋಜನಾ ನಿರ್ದೇಶಕ ಸುರೇಶ್ ಬಿ ಕುಲಕರ್ಣಿ, ವರಿಷ್ಠ ಸಮಾದೇಷ್ಟರು ಅಜಯ ಕುಮಾರ ಝಾ, ಸಹಾಯಕ ಸಮಾದೇಷ್ಟರು ಕುಶಲ್ ಕುಮಾರ ಯಾದವ್ ಮತ್ತಿತರರು ಉಪಸ್ಥಿತರಿದ್ದರು.