ತಾಂಬಾ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ತಾಂಬಾ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ Annual Friendship Conference of Sri Swami Vivekananda Primary and High School, Tamba Village

ಲೋಕದರ್ಶನ ವರದಿ 

          ತಾಂಬಾ 10 :  ಸಂಸ್ಥೆಯ ಅಧ್ಯಕ್ಷ  ಎನ್‌.ಜಿ.ಚೌಧರಿ ಹಾಗೂ ಪಾಲಕರು ತಮ್ಮ ಮಕ್ಕಳ ವಿದ್ಯಾ-ಅಭ್ಯಾಸದ ಕಡೆಗೆ ಹೇಚ್ಚಿನ ಗಮನ ಕುಡಬೇಕು ನಾವು ಗಳಿಸುವ ಆಸ್ತಿ ಒಂದುಸಲ ನಮ್ಮ ಕೈ ತಪ್ಪಬಹುದು ಆದರೆ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಬೇಳಿಸಿದರೆ ಕೊನೆಯವರೆಗೆ ಉಳಿಯುವದು ಎಂದು ಎಸ್‌.ಆರ್‌.ಮಾಳಗೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಸ್‌.ಎಸ್‌.ಕನಾಳ ಹೆಳಿದರು. 

ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಬಿಲ್ಕೊಡುವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡುವದು ಶಿಕ್ಷಕರ ಜವಬ್ದಾರಿ ಯಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರೆಲ್ಲರೂ ಉತ್ತಮವಾಗಿ ಮಕ್ಕಳಿಗೆ ಸಂಸ್ಕಾರಯುತ್ತ ಶಿಕ್ಷಣ ನೀಡುತ್ತಿರುವದು ಶ್ಲಾಘನಿಯ ಎಂದರು. 

ಉದ್ಘಾಟಕರಾದ ಎಸ್‌ವ್ಹಿವ್ಹಿ ಸಂಘದ ನಿದೇರ್ಶಕ ಅಪ್ಪಣ್ಣ ಕಲ್ಲೂರ ಮಾತನಾಡಿ ಪಾಲಕರು ದಿನನಿತ್ಯ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವದು ನಿಮ್ಮ ಜವಬ್ದಾರಿಯಾಗಿದೆ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಶಿಕ್ಷಕರೊಂದಿಗೆ ಕೈ ಜೋಡಿಸಿದರೆ ಯಶಸು ಸಾಧ್ಯ ಎಂದರು. ಇಂದಿನ ಅಚ್ಚಕಟ್ಟಾದ ಈ ಕಾರ್ಯಕ್ರಮ ನೋಡಿದರೆ ಇಲ್ಲಿನ ಶಿಕ್ಷಕರು ಬಹಳ ಶ್ರಮವಹಿಸುತ್ತಿರುವರಿ ಎಂದು ತಿಳಿಯುತ್ತದೆ ಎಂದರು.  

        ಕಾಂಗ್ರೆಸ್ ಮುಖಂಡ ರಾಯಗೊಂಡ ನಾಟಿಕಾರ ಮಾತನಾಡಿದರು, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್‌.ಜಿ.ಚೌಧರಿ ಪ್ರಸ್ಥಾವಿಕವಾಗಿ ಮಾತನಾಡಿದರು. ಗೋಳಸಾರದ ಶ್ರೀ ಅಭೀನವ ಪುಂಡಲಿಂಗೇಶ್ವರ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ಮಾಜಿ ತಾಪಂ ಸದಸ್ಯ ಪ್ರಕಾಶ ಮುಂಜಿ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ರಾಮಚಂದ್ರ ದೊಡ್ಡಮನಿ, ಸಿದ್ದಗೊಂಡ ಹಿರೇಕುರಬರ, ಸಿದ್ದು ಹತ್ತಳ್ಳಿ, ಮಲ್ಲಿಕಾರ್ಜುನ ಡೋಣೂರ, ಸಿ.ಎನ್‌.ಚೌಧರಿ, ಸಂತೋಷ ಕಲ್ಲೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಆದರ್ಶ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತ್ತು. ಮಕ್ಕಳಿಗೆ ಪಾರಿತೋಷಕ ವಿತರಣೆ ಮಾಡಲಾಯಿತ್ತು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.