ಲೋಕದರ್ಶನ ವರದಿ
ಕೊಪ್ಪಳ 06: ದೇಶವನ್ನು ಇಂದು ವಿಶ್ವಗುರುವನ್ನಾಗಿ ಮಾಡುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದಿಟ್ಟಹೆಜ್ಜೆ ಇಟ್ಟಿದ್ದಾರೆ. ದೇಶವನ್ನು ಸವರ್ಾಂಗೀಣ ಅಭಿವೃದ್ಧಿಪಡಿಸಲು ಮುಂದಾಗಿದ್ದು, ಹೊಗೆರಹಿತ ಗ್ರಾಮಗಳನ್ನು ಮಾಡುವ ಸಲುವಾಗಿ ಉಚಿತ ಗ್ಯಾಸ್ ವಿತರಿಸುವ ಯೋಜನೆ ಕೈಗೊಂಡಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಅಮರೇಶ್ ಕರಡಿ ಹೇಳಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ಕಿಟ್ ವಿತರಿಸಿ ನಂತರ ಅವರು ಮಾತನಾಡಿ ಇದೇ ಯೋಜನೆಯ ಸದುಪಯೋಗ ಪಡೆದ ರಾಜ್ಯದ ಅನೇಕರು ಇಂದು ಹೊಗೆಯಿಂದ ಮುಕ್ತಿ ಪಡೆದಿದ್ದಾರೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಸುಮಾರು 1500ರಷ್ಟು ಗ್ರಾಮಗಳನ್ನು ಹೊಗೆರಹಿತ ಗ್ರಾಮಗಳು ಎಂದು ಘೋಷಣೆ ಮಾಡಲಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಈ ಹಿಂದೆ ಸಿಲಿಂಡರ್, ಗ್ಯಾಸ್ ಎನ್ನುವುದು ಕನಸಿನ ಮಾತಾಗಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದಾಕ್ಷಣ ಬಡವರು ಸಹ ಉಚಿತವಾಗಿ ಗ್ಯಾಸ್ಕಿಟ್ ಪಡೆಯುವಂತಾಗಿದೆ. ಇದು ಅಚ್ಚೆ ದಿನ್ ಎಂದು ಯಾರೂ ಮರೆಯಬಾರದು ಎಂದರು.
ಈ ಹಿಂದಿನ ಕಾಂಗ್ರೆಸ್ ಸಕರ್ಾರ ಘೋಷಿಸಿದ್ದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಇದೀಗ ಸಂಪೂರ್ಣ ಮರೆಯಾಗಿದೆ. ಸುಳ್ಳು ಭರವಸೆ ನೀಡಿ ಜನರನ್ನು ಏಮಾರಿಸಿದ್ದನ್ನು ರಾಜ್ಯದ ಜನತೆ ನೋಡಿದ್ದರಿಂದಲೇ ಕಾಂಗ್ರೆಸ್ಗೆ ಇಷ್ಟು ಸ್ಥಾನಗಳು ಬಂದಿವೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಅವರಿಂದ ಚಾಲನೆ ಕೊಡಿಸಲಾಗುವುದು ಎಂದು ಹೇಳಿದರು.
ಅಧಿಕಾರಕ್ಕೆ ಬಂದು ನಾಲ್ಕು ವರ್ಷದಲ್ಲಿ ಕೇಂದ್ರ ಸಕರ್ಾರ ದೇಶಾದ್ಯಂತ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿಗೆ ಅತಿಹೆಚ್ಚಿನ ಮತ ನೀಡುವ ಮೂಲಕ ಜನತೆ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಲೂಕು ಪಂಚಾಯತ್ ಸದಸ್ಯ ಚಂದ್ರಕಾಂತ್ ನಾಯಕ್, ಗ್ರಾಮದ ಮುಖಂಡರಾದ ಹನುಮನಗೌಡ ಪಾಟೀಲ್, ಮಂಜುನಾಥ ಪಾಟೀಲ್ ಹಂದ್ರಾಳ್, ಕುಣಿಕೇರಿ ಗ್ರಾಮದ ಉಪಸ್ಥಿತರಿದ್ದರು.