ಮಾಂಜರಿ: ಸ್ವಚ್ಛ ಮೇವ ಜಯತೆ ಕಾರ್ಯಕ್ರಮ

ಲೋಕದರ್ಶನ ವರದಿ

ಮಾಂಜರಿ 13:  ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆಯ ಬಗ್ಗೆ ತಿಳವಳಿಕೆ ನೀಡಬೇಕು ಅತ್ಯವಶ್ಯಕವಾಗಿದ್ದು ಪ್ರತಿಯೊಂದು ಮನೆ ಹತ್ತಿರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 500 ಸಸಿಗಳನ್ನು ನೆಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ನಿಂಗಪ್ಪಾ ಬಿರನಗಡ್ಡಿ ಹೇಳಿದರು.

ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಸ್ವಚ್ಛಮೇವ ಜಯತೆ ಕಾರ್ಯಕ್ರಮದಲ್ಲಿ ಸಸಿಗಳ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಗಿಡಗಳು ತಾಯಿ ಇದ್ದಂತೆ ಮಗುವಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ತಾಯಿ ನಿಡಿದಂತೆ ಗಿಡಗಳು ನಮ್ಮನ್ನು ಪೋಷಿಸುತ್ತವೆ.

ತಿನ್ನಲು ಹಣ್ಣು ಕಟ್ಟಿಗೆ ನೆರಳು ಪಕ್ಷಿಗಳಿಗೆ ಆಶ್ರಯ ಶುದ್ಧಗಾಳಿ ಮಳೆ ಮಣ್ಣನ್ನು ಸಂರಕ್ಷಿಸುವಲ್ಲಿ ಗಿಡಗಳು ಮಹತ್ವದ ಪಾತ್ರ ವಹಿಸುತ್ತದೆ ಎಲ್ಲರೂ ಒಂದೂಂದು ಗಿಡನೆಟ್ಟು ಬರಗಾಲ ತಡಗಟ್ಟಿಸಬೇಕಾಗಿದೆ ಹಾಗೂ ಸ್ವಚ್ಛಮೇವ ಜಯತೆ ಈ ಕಾರ್ಯಕ್ರಮದಿಂದ ತಮ್ಮ ಮನೆಗಳ ಮುಂದೆ ಇದ್ದಂತಾ ಒಣ ಹಾಗೂ ಹಸಿ ಕಸವನ್ನು ಬೆರ್ಪಡಿಸಿ ವಿಲೆವಾರಿ ಮಾಡಬೆಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಮಾಯಾ ಭಿಲವಡೆ, ಉಪಾಧ್ಯಕ್ಷರಾದ ಶೀತಲ ಮಗೆಣ್ಣವರ, ಸದಸ್ಯರಾದ ಸಿಕಂದರ ತಾಂಬೋಳಿ, ತಮ್ಮಣ್ಣಿ ಕೋರೆ ಮಾಂಜರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಸಾಹೇಬ ಯಾದವ ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯತಿಯ ಎಲ್ಲ ಸಿಬ್ಬಂಧಿ ವರ್ಗ ತಾ.ಪಂ. ಐ.ಇ.ಸಿ. ಸಂಯೋಜಕರಾದ ರಂಜಿತ ಕಾಂಬಳೆ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸಕರ್ಾರಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.