ಮಾಂಜರಿ: ಸಂಭ್ರಮದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಮಾಂಜರಿ 14:  ಹಂಡ ಕುದರಿ, ಪುಂಡ ಅರಣ್ಯಸಿದ್ದಗ್ ಚಾಂಗಭಲೋ, ಮಲಕಾರಿ ಸಿದ್ದಗ್ ಚಾಂಗಭಲೋ, ಬಿಳಿಗುಡಿ ಅರಣ್ಯಸಿದ್ದಗ್ ಚಾಂಗಭಲೋ. . . . ಹೀಗೆ ಭಕ್ತಿಪರವಶರಾಗಿ ಉದ್ದೋಷಗಳನ್ನು ಹಾಕುತ್ತಾ ಪಲ್ಲಕ್ಕಿ ಮೇಲೆ ಭಂಡಾರ ಹಾರಿಸುತ್ತ ಭಕ್ತಿ ಸೇವೆಯನ್ನು ಸಲ್ಲಿಸುತ್ತಿದ್ದ ಭಕ್ತಿಮಯ ದೃಶ್ಯ ರೋಮಾಂಚನವನ್ನು ಉಂಟು ಮಾಡುತ್ತಿತ್ತು ಹಳದಿ ಹಾಸಿಗೆಯನ್ನು ಉಹೊದಂತೆ ಕಾಣುತ್ತಿದ್ದ ಇಡಿ ಪರಿಸರದಲ್ಲಿ ಡೊಳ್ಳು ವಾದನದ ಸದ್ದು ಮಾರ್ದನಿಸುತ್ತಿತ್ತು.

ಚಿಕ್ಕೋಡಿ ತಾಲೂಕಿನಸುಕ್ಷೇತ್ರ ಕೇರೂರರ ಗ್ರಾಮದಲ್ಲಿ ಪ್ರತತಿ ವರ್ಷದಂತೆ ಕಳೆದ 5 ದಿನಗಳಿಂದ ವಿಜೃಂಭಣೆಯಿಂದ ನಡೆದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ದಿನವಾದ ಗುರುವಾರ ಬೆಳ್ಳಿಗೆ ಗ್ರಾಮದ ಬನದಲ್ಲಿರುವ ಅರಣ್ಯ ಸಿದ್ದೆಶ್ವರರ ತಾಯಿಯಾದ ಜನವ್ವ ತಾಯಿ ಮಂದಿರದ ಬಳಿ ನಿವಾಳಕಿಉ ಸಂಧರ್ಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬಂದಿದ್ದ ಸಹಸ್ರಾರು ಜನ ಭಕ್ತರು ಪಲ್ಲಕ್ಕಿ ಮೇಲೆ ಭಂಡಾರ, ಉತ್ತತ್ತಿ, ಕೊಬ್ಬರಿ, ಹಾರಿಸಿ ಭಕ್ತಿ ಸೇವೆ ಸಮರ್ಪಿಸಿದರು. ದೇವರುಷಿ ಅವರಿಂದ ದೇವರ ನುಡಿಯನ್ನು ಆಲಿಸಲು ಭಕ್ತಸಾಗರವೇ ಜಮಾಯಿಸಿತ್ತು ಜಾತ್ರೆಗೆ ಕಳೆದ 50 ವರ್ಷಗಳ ಸುಧಿರ್ಘ ಇತಿಹಾಸವಿದ್ದು ಪ್ರತಿವರ್ಷ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿವೆ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವ ಮಾದಿಗರ ಓಣಿಯಿಂದ ಗದ್ದುಗೆ ಮೆನೆಗೆ ಚಮ್ಮಾಳಿಗೆ ತರುವುದೊಂದಿಗೆ ಅರಂಭಗೊಂಡಿತು ಮರುದಿನ ಮಧ್ಯಾಹ್ನ ಗದದ್ದುಉಗೆ ಮನೆಯಿಂದ ಪಲ್ಲಕಿ ಬನ ತಲುಪಿತು ನಂತರದ ದಿನ ಸ್ಲೊ ಸೈಕಲ್ ಶರತ್ತು, ಡುವ ಶರತು, ನಾಯಿಗಳ ಓಟದ ಸ್ಪಧರ್ೇ, ಜನರಲ್  ಸೈಕಲ್ ಸ್ಪಧರ್ೆ, ಮುಕ್ತ ಕಕಬ್ಬಡಿ ಸ್ಪರ್ಧೆ, ಕುದುರೆ ಶರತ್ತು, ಹಗ್ಗಜಗ್ಗಾಟ ಮೊದಲಾದ ಸ್ಪಧರ್ೆಗಳನ್ನು ಹಾಗೂ ಶಶಾಹಿರಕಿ ಗಾಯನ ಪ್ರದರ್ಶನ ಅನ್ನಪ್ರಸಾದ ಆಯೋಜಿಸಲಾಗಿತ್ತು.