ಲೋಕದರ್ಶನ ವರದಿ
ಮಹಾಲಿಂಗಪೂರ 26: ಅಂಗಡಿಯ ಆವರಣದಲ್ಲಿ ರಾತ್ರಿ ಬಿಟ್ಟು ಹೋದ ಬೈಕನ್ನು ಸ್ಥಳೀಯ ಪೋಲಿಸ್ ರು ಮಾಲಿಕನಿಗೆ ಮರಳಿಸಿದ್ದಾರೆ.
ಚನ್ನಮ್ಮ ವೃತ್ತ ಹತ್ತಿರವಿರುವ ಪಂಕ್ಚರ್ ಅಂಗಡಿ ಮಾಲಿಕ ಝಾಕಿರ್ ಅಂಬಿಯವರ ಪುತ್ರ ರಮಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲು ಮಸ್ಜಿದಕ್ಕೆ ಹೋಗುವ ಅವಸರದಲ್ಲಿ ತಮ್ಮ ಸ್ವಂತ ಮಾಲ್ಕಿ ಎಚ್.ಎಫ್.ಡಿಲಕ್ಸ್ ಮೋಟರ್ ಬೈಕ್ ನ್ನು ಅಂಗಡಿಯ ಹೊರಭಾಗದಲ್ಲಿ ಬಿಟ್ಟು ಹೋಗಿದ್ದು ಬೆಳಗ್ಗೆ ಬಂದಾಗ ಗಾಡಿ ಕಾಣದಾಗಿ ಗಾಬರಿಯಾಗಿದ್ದಾನೆ. ಯಾಕೆಂದರೆ ಸಾಲ ಸೋಲ ಮಾಡಿ ಖರಿದಿಸಿದ್ದು ಇನ್ನೂ ಅದರ ಸಾಲ ಮುಟ್ಟಿಲ್ಲವಾದ್ದರಿಂದ ಚಿಂತಾಕ್ರಾಂತನಾಗಿ ಅಲೆದಾಡುತ್ತಿರುವಾಗ ಪೋಲಿಸರು ಗಾಡಿ ಇದ್ದ ಮಾಹಿತಿ ನೀಡಿದ್ದಾರೆ.
ನಂತರ ಬೆಳಗ್ಗೆ ವಾರಸುದಾರನನ್ನು ಕರೆಸಿ ಸೂಕ್ತ ದಾಖಲೆಗಳನ್ನು ಪರಿಶಿಲಿಸಿ ಗಾಡಿಯನ್ನು ಮರಳಿಸಿದ್ದಾರೆ. ಈ ಕಾರ್ಯಕ್ಕೆ ಶ್ರೇಷ್ಠ ಕರ್ತವ್ಯ ಪ್ರಜ್ಞೆ ಎಂದು ದಾಸರ್ ಅವರನ್ನು ಠಾಣಾಧಿಕಾರಿ ರವಿಕುಮಾರ್ ಧರ್ಮಟ್ಟಿಯವರು ಶಹಬ್ಬಾಸ್ ಗಿರಿ ನೀಡಿದ್ದು ಮತ್ತು ಸಾರ್ವಜನಿಕರು ಈ ಶ್ಲ್ಯಾಘನೀಯ ಕಾರ್ಯಕ್ಕೆ ಅಭಿನಂದಿಸಿದ್ದಾರೆ. ಠಾಣೆಯ ರಾತ್ರಿ ಕರ್ತವ್ಯದಲ್ಲಿ ಕ್ರೈಮ್ ಪಿ.ಎಸ್.ಆಯ್ ಸಿ.ಬಿ.ಬದ್ನೂರ್ ಹಾಗೂ ಎಸ್.ಎನ್.ದಂಡಿನ ಇದ್ದರು.