ಸಾಹಿತ್ಯ ಸಮ್ಮೇಳನವನ್ನು ಮನೆಯ ಹಬ್ಬವಾಗಿ ಆಚರಿಸೋಣ : ಚೌಧರಿ


 ಸಿಂದಗಿ: ಕನ್ನಡ ನಾಡು ನುಡಿಗಾಗಿ ನಾವು ನಿತ್ಯ ದುಡಿದರು ಕನ್ನಡದ ಋಣ ತೀರಿಸಲು ಸಾಧ್ಯವಿಲ್ಲ ಕನ್ನಡ ನಮ್ಮ ಅನ್ನದ ಭಾಷೆ ಸಾಹಿತ್ಯ ಸಮ್ಮೇಳನವನ್ನು ಮನೆಯ ಹಬ್ಬವಾಗಿ ನಾವೇಲ್ಲ ಆಚರಿಸೋಣ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ  ತಾಲೂಕಾಧ್ಯಕ್ಷ ಎಸ್.ಬಿ.ಚೌಧರಿ ಹೇಳಿದರು.

           ಅವರು ಪಟ್ಟಣದ ಕಸಾಪ ಭವನದಲ್ಲಿ ಶುಕ್ರವಾರ ನಡೆದ ತಾಲೂಕಿನ ಬೂದಿಹಾಳ(ಪಿ.ಎಚ್) ಗ್ರಾಮದಲ್ಲಿ ಜುಲೈ 31 ರಂದು ಜರುಗಲಿರುವ ತಾಲೂಕಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಿಂದಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು  ಮಾಡುತ್ತಾ  ಬಂದಿದೆ. ತಾಲೂಕಿನ ಬೋರಗಿ, ದೇವರಹಿಪ್ಪರಗಿ, ಕನ್ನೋಳ್ಳಿ ಹಾಗೂ ಗೋಲಗೇರಿ ಗ್ರಾಮಗಳಲ್ಲಿ ಕ್ರಮವಾಗಿ 4 ತಾಲೂಕಾ ಸಮ್ಮೇಳನಗಳನ್ನು ಅರ್ಥ ಪೂರ್ಣವಾಗಿ ಮಾಡಿ ಯಶಸ್ವಿಗೊಳಿಸಿದೆ ಸದಸ್ಯ ಜುಲೈ 31 ರಂದು ತಾಲೂಕಿನ ಬೂದಿಹಾಳ(ಪಿ.ಎಚ್) ಗ್ರಾಮದಲ್ಲಿ 5 ನೇ ಸಮ್ಮೇಳನವನ್ನು ಆಯೋಜಿಸಲು ಸಿದ್ದರಾಗಿದ್ದೇವೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಕನ್ನಡ ಪರಂಪರೆ ಕನ್ನಡದ ನೆಲೆದಲ್ಲಿಯೆ ದೂರವಾಗುತ್ತಿರುವುದು ವಿಷಾದನಿಯ. ಕನ್ನಡ ಭಾಷೆಯನ್ನು ನಾವೇಲ್ಲ ಇಂದು ಯೋಗ್ಯ ರೀತಿಯಲ್ಲಿ ಬಳಸುತ್ತಿಲ್ಲ ಕನ್ನಡ ಸಾಹಿತ್ಯದ ಬೆಳಕು ಜಗತ್ತಿನ ಎಲ್ಲ ಭಾಗದಲ್ಲಿ ಇದ್ದರು ಕನ್ನಡ ನೆಲದಲ್ಲಿ ಇದು ನೆಲಕಚ್ಚಿದಂತಾಗಿದೆ ಕನ್ನಡಿಗರು ಕನ್ನಡದ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದ್ದಲ್ಲಿ ಹಾಗು ಕನ್ನಡದಲ್ಲಿಯೆ ಮಾತನಾಡಿದ್ದಲ್ಲಿ ಕನ್ನಡಕ್ಕೆ ಮರು ಜೀವ ಬರುತ್ತದೆ ಆ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಕಾರ್ಯ ಮಾಡಲಿವೆ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದರು.

ನಂತರ ನಡೆದ ಚಚರ್ೆಯಲ್ಲಿ ಹಿರಿಯ ಸಾಹಿತಿ ಅಂಬಿಕಾತನಯದತ್ತ ವೇದಿಕೆಯ ಸಾಹಿತಿ ವೃತ್ತಿಯಲ್ಲಿ ವೈಧ್ಯರಾಗಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಡಾ. ಬಿ.ಆರ್ ನಾಡಗೌಡ ಅವರ ಹೆಸರನ್ನು ಪ್ರಸ್ತಾಪಿಸಲಾಯಿತು ಕಾಯರ್ಾಕಾರಿಣಿ ಮಂಡಳಿಯ ಸರ್ವಸದಸ್ಯರು ಇದಕ್ಕೆ ಸವರ್ಾನುಮತದಿಂದ ಸಮ್ಮತಿ ಸೂಚಿಸಿದರು.

      ಈ ಸಂಧರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಸಿ.ಎಂ.ದೇವರೆಡ್ಡಿ, ತಾಲೂಕಾ ಪ್ರಧಾನ ಕಾರ್ಯದಶರ್ಿ ಸಿದ್ದಲಿಂಗ ಕಿಣಗಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯವನ್ನು ಪ್ರತಿಯೊಬ್ಬರು ಧನಾತ್ಮಕವಾಗಿ ಸ್ಪಂದಿಸಿದ್ದಲ್ಲಿ ಕಾರ್ಯಕ್ರಮ ಯಶಸ್ವಿಗೊಳ್ಳುತ್ತದೆ. ಅಂದು ಬೆಳಗ್ಗೆಯಿಂದ ರಾತ್ರಿಯ ವರೆಗೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಲ್ಲರೂ ಜಾತಿ ಭೇದ ಮರೆತು ಕಾರ್ಯಕ್ರಮದಲ್ಲಿ ಭಾಗವಹಸಿ ತಾಲೂಕಿನಲ್ಲಿನ ಸಾಹಿತ್ಯವನ್ನು ನಾಡಿಗೆ ಪರಿಚಯಿಸೋಣ ಎಂದರು.ಕಾರ್ಯಕ್ರಮದಲ್ಲಿ ಪರಿಷತ್ತಿನ ಸಾಯಬಣ್ಣ ದೇವರಮನಿ, ರಾಘವೇಂದ್ರ ಬಜಂತ್ರಿ, ಸಿ.ಎನ್.ಶಿರಕನಳ್ಳಿ, ಮುತ್ತು ಬ್ಯಾಕೋಡ, ಮಹಾಂತೇಶ ನೂಲನ್ನವರ, ಅಜೇಯ ಯರಗಟ್ಟಿ ಮತ್ತು ಇತರರು ಇದ್ದರು.

        ಗೌರವ ಕಾರ್ಯದಶರ್ಿ ಬಸವರಾಜ ಅಗಸರ ಸ್ವಾಗತಿಸಿ ನಿರೂಪಿಸಿದರು, ಪತ್ರಿಕಾ ಪ್ರತಿನಿಧಿ ಆನಂದ ಶಾಬಾದಿ ವಂದಿಸಿದರು.