ಹೊಲಿಗೆ ತರಬೇತಿ ಕೇಂದ್ರವನ್ನು ಉದ್ಘಾಟನೆ


ಲೋಕದರ್ಶನ ವರದಿ

ಬೆಳಗಾವಿ 07: ದಿ. 06ರಂದು ವಿರಾಟ ವಿಶ್ವಕರ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆ, ಶಹಾಪೂರ, ಬೆಳಗಾವಿ ಇವರಿಗೆ ರೋಟರಿ ಕ್ಲಬ್, ಬೆಳಗಾವಿ ದಕ್ಷಿಣ ಇವರ ವತಿಯಿಂದ ನೀಡಿದ ಹೊಲಿಗೆ ಮಷೀನುಗಳ ಸಹಾಯದಿಂದ ಹೊಲಿಗೆ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು. 

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಡಾ. ನೇತ್ರಾವತಿ ಸುತಾರ, ಎಮ್.ಕೆ.ಬಡಿಗೇರ, ಎಸ್.ಕೆ.ಪತ್ತಾರ, ಮೋಹನ ಬಡಿಗೇರ ಇವರುಗಳು ದ್ವೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಣರ್ಿಮಾ ಪತ್ತಾರ ವಹಿಸಿದ್ದರು. 

ಗೀತಾ ಸುತಾರ ಅತಿಥಿಗಳನ್ನು ಸ್ವಾಗತಿಸಿದರು. ಪ್ರಭಾ ಪತ್ತಾರ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೇಮಾ ಹಾವನೂರ ವಂದನಾರ್ಪಣೆ ಮಾಡಿದರು. ರಾಜಶ್ರೀ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಇನ್ನುಳಿದ ಪದಾಧಿಕಾರಿಗಳಾದ ರೂಪಾ ಸುತಾರ, ಆರತಿ ಹಾವನೂರ, ಜ್ಯೋತ್ಸ್ನಾ ರಟ್ಟಿಹಳ್ಳಿ, ಸ್ನೇಹಾ ಸಾಲಿ ಹಾಗೂ ಹೊಲಿಗೆ ತರಬೇತಿ ಶಿಕ್ಷಕಿ ಮಧು ಕಡಕೋಳ ಇವರೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.