ಲೋಕದರ್ಶನ ವರದಿ
ಕುರುಗೋಡು 07: ಅನೇಕ ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಾ ಬಿಜೆಪಿ ಪಕ್ಷವು ಜಗತ್ತಿನಲ್ಲೆ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಕಂಪ್ಲಿ ಕ್ಷೇತ್ರದ ಪ್ರಧಾನ ಕಾರ್ಯದಶರ್ಿ ಎಸ್ಕೆ.ಸುನೀಲ್ಕುಮಾರ್ ತಿಳಿಸಿದರು.
ಅವರು ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿನ ಧ್ಯಾನ ಮಂದಿರದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಸಿ ನೆಡುವದರ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಪಕ್ಷದಲ್ಲಿ ಒಟ್ಟು 11 ಕೋಟಿಗಿಂತ ಹೆಚ್ಚಿನ ಸದಸ್ಯರಿದ್ದಾರೆ. ತಾಲೂಕಿನಲ್ಲಿ 15 ಸಾವಿರಕ್ಕಿಂತ ಹೆಚ್ಚಿನ ಸದಸ್ಯರಿದ್ದಾರೆ. ಈಗ ಪಕ್ಕವನ್ನು ಇನ್ನೊಷ್ಟು ಬಲಪಡಿಸಲು ಶೇ.20ರಷ್ಟು ಸದಸ್ಯರನ್ನು ಹೆಚ್ಚು ಮಾಡುವ ಸಂಕಲ್ಪವನ್ನು ಮಾಡಲಾಗಿದೆ. ಮಾಜಿ ಶಾಸಕರು ಟಿಹೆಚ್.ಸುರೇಶ್ಬಾಬು 10 ವರ್ಷಗಳ ಕಾಲ ಶಾಸಕರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಕುರುಗೋಡು ತಾಲೂಕಾಗಲು ಬಹಳಷ್ಟು ಶ್ರಮವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕು ಹೆಚ್ಚಿನ ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿ ಶಾಸಕರ ಅವಶ್ಯಕತೆವಿದೆ ಆಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಬಿಜೆಪಿ ನೂತನ ಸದಸ್ಯತ್ವಕ್ಕೆ ಒತ್ತು ನೀಡಬೇಕು ಎಂದರು.
ಎಲ್ಲಾ ಕಾರ್ಯಕರ್ತರು ಸಸಿ ನೆಡುವದರ ಮೂಲಕ ಸದಸ್ಯತ್ವ ಅಭಿಯಾನ ಪ್ರಾರಂಭಿಸಿ ಇಂದು ಒಟ್ಟು 300ಕ್ಕಿಂತ ಹೆಚ್ಚು ಸದಸ್ಯತ್ವ ಮಾಡಿಸಿದರು.
ಈ ಸಂದರ್ಭದಲ್ಲಿ ಒಬಿಸಿ ಮೋಚರ್್ ಅಧ್ಯಕ್ಷ ಚಾನಾಳ್ ಆನಂದ, ಎಸ್ಟಿ ಮೋಚರ್್ ಪ್ರಧಾನ ಕಾರ್ಯದಶರ್ಿ ಎನ್.ಕೋಮಾರೆಪ್ಪ, ಮುಖಂಡ ಸೋಮಶೇಖರ್ ಗೌಡ, ಎನ್.ಎಂ.ಪ್ರೇಮ್ಸ್ವಾಮಿ, ನಗರ ಘಟಕ ಅಧ್ಯಕ್ಷ ಹೂಗಾರ್ ಯೋಗೀಶ್, ಉದಯಕುಮಾರ್ ಸ್ವಾಮಿ, ನಟರಾಜಗೌಡ, ಗಣೇಶ್, ಎಸ್ಕೆ.ನಾಗರಾಜ್ ಹಾಗೂ ಇನ್ನಿತರ ಕಾರ್ಯಕರ್ತರು ಇದ್ದರು.