ಅನಂತಕುಮಾರ ಹೆಗಡೆ ಗೆಲವು:ಮಾರಿಹಾಳ ಸಂಭ್ರಮಾಚರಣೆ

ಚನ್ನಮ್ಮನ ಕಿತ್ತೂರು 24: ಈ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವವು ಗೆಲವು ಸಾಧಿಸಿದೆ ಎಂದು ಮಾಜಿ ಶಾಸಕ ಸುರೇಶ ಮಾರಿಹಾಳ ಹೇಳಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಅನಂತಕುಮಾರ ಹೆಗಡೆ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದ ಕಾರಣ ಪಟ್ಟಣದ ತಮ್ಮ ನಿವಾಸದಲ್ಲಿ ಅನೇಕ ಬೆಂಬಲಿಗರ ಜೊತೆ ಗುರುವಾರ ಸಂಭ್ರಮಾಚರಣೆ ನಡೆಸಿ ಅವರು ಮಾತನಾಡಿದರು.

ದೇಶದ ಸುರಕ್ಷತೆಯನ್ನು ಮನದಲ್ಲಿಟ್ಟುಕೊಂಡ ದೇಶವಾಸಿಗಳು 300 ಕ್ಕೂ ಹೆಚ್ಚು ಅಭ್ಯಥರ್ೀಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ದೇಶದ ಆಡಳಿತ ಚುಕ್ಕಾಣೆಯನ್ನು ನೀಡಿದ್ದಾರೆ. ಅದರಂತೆಯೆ ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯ ಜನರು ಸಹ ಬಿಜೆಪಿಯನ್ನು ಬೆಂಬಲಿಸಿ ಅನಂತಕುಮಾರ ಹೆಗಡೆ ಅವರಿಗೆ ಆಶಿರ್ವದಿಸಿದ್ದಾರೆ ಎಂದ ಅವರು, ಅನೇಕ ಹೋರಾಟ ಹಾಗೂ ಹಿಂದೂ ಪರ ವಾದ ಮತ್ತು ಮಾತಿನ ಚಾಕಚಕ್ಯತೆ ಅನಂತ ಕುಮಾರ ಹೆಗಡೆ ಅವರಿಗೆ ಗೆಲುವಿನ ಕವಚವಾಗಿ ಕಾರ್ಯನಿರ್ವಹಿಸುವ ಜೊತೆಗೆ 4 ಲಕ್ಷಕ್ಕೂ ಹೆಚ್ಚಿನ ಮತಗಳ ಮುನ್ನಡೆಯನ್ನು ಅನಂತಕುಮಾರ ಹೆಗಡೆ ಅವರಿಗೆ ನೀಡಿದೆ ಎಂದರು.

ಈ ಲೋಕಸಭಾ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದ ಜನರು 50 ಸಾವಿರಕ್ಕೂ ಹೆಚ್ಚು ಮತಗಳನ್ನು ಅನಂತಕುಮಾರ ಹೆಗಡೆ ಅವರಿಗೆ ನೀಡುವ ಮೂಲಕ ದಿಟ್ಟ ನಿಧರ್ಾರ ಕೈಗೊಂಡು ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಮತ್ತಷ್ಟು ಬಲ ಪಡಿಸಿದ ಕಿತ್ತೂರು ಕ್ಷೇತ್ರದ ಎಲ್ಲ ಮತದಾರರಿಗೂ ವಂದಿಸಿದರು.

ಇದಕ್ಕೂ ಮೊದಲು ಮಾಜಿ ಶಾಸಕ ಸುರೇಶ ಮಾರಿಹಾಳ ಬೆಂಬಲಿಗರ ಜೊತೆಗೂಡಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

ಮಾಜಿ ತಾಪಂ ಅಧ್ಯಕ್ಷ ದಿನೇಶ ವಳಸಂಗ, ಶಿವಾನಂದ ಜಕಾತಿ, ವಿಶ್ವನಾಥ ಶೆಟ್ಟರ, ಮೃತ್ಯುಂಜಯ ಮಾರಿಹಾಳ, ಉಮಾಕಾಂತ ಭಾರತಿ,  ಬಸವರಾಜ ಭೀಮರಾಣಿ, ಈರಪ್ಪ ಬಬ್ಲಿ, ಪ್ರವೀಣ ಮಾರಿಹಾಳ, ಮಹೇಶ ಪತ್ತಾರ, ಸುರೇಶ ದೇವರಮನಿ, ಅಪ್ಪಣ್ಣ ಮುಷ್ಠಗಿ, ಬುಡ್ಡೆಸಾಬ ಹವಾಲ್ದಾರ, ವಿಲಾಸ ಮುರಶಿದ್ಧಿ, ಸೇರಿದಂತೆ ನೂರಾರು ಬೆಂಬಲಿಗರು ಹಾಜರಿದ್ದರು.