ಕರಾಟೆ ಶಿಕ್ಷಕರ ಪೂಣರ್ಾವಧಿ ನೇಮಕಕ್ಕೆ ಒತ್ತಾಯಿಸಿ ಮನವಿ

ಜಿಲ್ಲಾ ಕರಾಟೆ ಡೋ ಮತ್ತು ಬಾಕ್ಸಿಂಗ ಅಸೊಶಿಯೆಶನ ಅಧ್ಯಕ್ಷ ರಾಜು ಪಾಟೀಲ ಹಾಗೂ ಇನ್ನಿತರ ಕ್ರೀಡಾ ಪಟುಗಳು, ಉಪತಹಶೀಲ್ದಾರ


ಲೋಕದರ್ಶನ ವರದಿ

ಶೇಡಬಾಳ 05: ಕರಾಟೆ ಶಿಕ್ಷಕರಿಗೆ ಸಕರ್ಾರದ ಅನುದಾನದಲ್ಲಿ ಪ್ರೋತ್ಸಾಹ ನೀಡುವ ಕುರಿತು ಹಾಗೂ ಅನುದಾನಿತ ಪ್ರೌಢ ಶಾಲೆಯ ಹೆಣ್ಣು ಮಕ್ಕಳಿಗೆ ಸ್ವರಕ್ಷಣೆ ಕೌಶಲ್ಯವನ್ನು (ಕರಾಟೆ) ಕಡ್ಡಾಯಗೊಳಿಸಿ ಕರಾಟೆ ಶಿಕ್ಷಕರನ್ನು ಪೂಣರ್ಾವಧಿಗೆ ನೇಮಕ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕರಾಟೆ ಡೋ ಮತ್ತು ಬಾಕ್ಸಿಂಗ ಅಸೊಶಿಯೇಶನ ವತಿಯಿಂದ ಕಾಗವಾಡ ಉಪತಹಶಿಲ್ದಾರ ವಿಜಯ ಚೌಗಲಾ ಅವರ ಮೂಲಕ ಕನರ್ಾಟಕ ರಾಜ್ಯ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವರಾದ ಪ್ರಮೋದ ಮಧ್ವರಾಜ ಅವರಿಗೆ ಮನವಿ ಪತ್ರ ಅಪರ್ಿಸಿ ಒತ್ತಾಯಿಸಲಾಯಿತು.

ಗುರುವಾರ ದಿ. 5 ರಂದು ಕಾಗವಾಡ ತಾಲೂಕಾ ದಂಡಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿ ಜಿಲ್ಲಾ ಕರಾಟೆ ಡೋ ಮತ್ತು ಬಾಕ್ಸಿಂಗ ಅಸೊಶಿಯೆಶನ ಅಧ್ಯಕ್ಷರಾದ ರಾಜು ಪಾಟೀಲ ಹಾಗೂ ಇನ್ನಿತರ ಕ್ರೀಡಾ ಪಟುಗಳು, ಉಪತಹಶೀಲ್ದಾರ ವ್ಹಿ.ಬಿ.ಚೌಗಲಾರವರಿಗೆ ಮನವಿ ಪತ್ರ ನೀಡಿದರು. 

ಮನವಿ ಪತ್ರ ಅಪರ್ಿಸಿ ರಾಜು ಪಾಟೀಲ ಮಾತನಾಡಿ ಬೆಳಗಾವಿ ಜಿಲ್ಲಾ ಕರಾಟೆ ಮತ್ತು ಬಾಕ್ಸಿಂಗ್ ಅಸೊಶಿಯೆಶನ ಸಂಸ್ಥೆಯು ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮೀಣ ಭಾಗದ ಶಾಲಾ ವಿದ್ಯಾಥರ್ಿ ವಿದ್ಯಾಥರ್ಿನಿಗಳಿಗೆ ಕರಾಟೆ ತರಬೇತಿಯನ್ನು ನೀಡುತ್ತಾ ಬಂದಿದೆ. ಕರಾಟೆ ಪಟುಗಳು ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪಧರ್ೆಯಲ್ಲಿ ಚಿನ್ನದ ಪದಕ ಪಡೆದು ವಿಜೇತರಾಗಿದ್ದಾರೆ. ಕರಾಟೆ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯದ ಎಲ್ಲ ಕರಾಟೆ ಶಿಕ್ಷಕರಿಗೆ ಸಕರ್ಾರದ ಯಾವುದೇ ಪ್ರೋತ್ಸಾಹ ಧನ ಸಿಗುತ್ತಿಲ್ಲ. ಆದ್ದರಿಂದ ದಯವಿಟ್ಟು ನಮ್ಮ ಭಾರತೀಯ ಕಲೆಯಾಗಿರುವ ಈ ಕರಾಟೆಯನ್ನು ಸಕರ್ಾರದ ಪ್ರೋತ್ಸಾಹ ಧನ ಹಾಗೂ ಕರಾಟೆ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಅದರಂತೆ ಮುಖ್ಯ ಬೇಡಿಕೆಗಳಾದ ಸಕರ್ಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲಿ ಕರಾಟೆ ಕಲೆಯನ್ನು ಕಡ್ಡಾಯಗೊಳಿಸುವುದು, ಸಾರ್ವಜನಿಕ ಶಿಕ್ಷಣ ಇಲಾಖೆ ಕರಾಟೆ ಸ್ಪಧರ್ಾ ಕುಟಕ್ಕೆ ಸಕರ್ಾರದಿಂದ ಅನುದಾನ ಒದಗಿಸುವುದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ವಿಭಾಗದ ಕರಾಟೆ ಸ್ಪಧರ್ೆಯು ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ರಾಜು ಮಟ್ಟದಲ್ಲಿ ಮಾತ್ರ ನಡೆಸುತ್ತಿದ್ದು ಇದನ್ನು ರಾಷ್ಟ್ರ ಮಟ್ಟದಲ್ಲಿ ನಡೆಸುವಂತೆ ಕೈಗೊಳ್ಳಬೇಕು, ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರಾಟೆ ಪಟುಗಳಿಗೆ ಗೌರವ ವೇತನ ಸಕರ್ಾರಿ ಉದ್ಯೋಗ ಶಿಕ್ಷಣದಲ್ಲಿ ಸಡಲಿಕೆ, ಸಕರ್ಾರಿ ಶಾಲಾ ಕಾಲೇಜುಗಳಲ್ಲಿ ಸಂಬಂಧ ಪಟ್ಟ ಕರಾಟೆ ಶಿಕ್ಷಕರನ್ನು ನೇಮಿಸುವುದು, ಕನರ್ಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ತಾಲೂಕಾಗಳಲ್ಲಿ ಕ್ರೀಡಾಂಗಣ ಸೌಲಭ್ಯ ಹಾಗೂ ಕರಾಟೆ ಕ್ರೀಡಾ ಕಚೆೇರಿಗಳು ತೆರೆಯುವುದಕ್ಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಗಿದೆ ಎಂದು ಹೇಳಿದರು. ಬಾಕ್ಸಿಂಗ್ ಅಸೊಶಿಯೇಶನ್ ಅಧ್ಯಕ್ಷ ರಾಜು ಪಾಟೀಲ, ಕಾರ್ಯದಶರ್ಿ ಅಜೀತ ಅರಬೋಳೆ, ಮಹೇಶ ಪಾಟೀಲ, ಬಂಡು ಪವಾರ, ಕರಾಟೆ ಶಿಕ್ಷಕರಾದ ಬಾಳಾಬಾಯಿ ನಾಯಿಕ, ಅನಿಲ ಭಜಂತ್ರಿ, ಕಿರಣ ಭಜಂತ್ರಿ, ಲಕ್ಷ್ಮಣ ಮೊದವಿ, ಪ್ರವೀಣ ಮಾಳಿ, ರವಿಚಂದ್ರ ನಾಯಿಕ ಸೇರಿದಂತೆ ಅನೇಕರು ಇದ್ದರು.