ಲೋಕದರ್ಶನ ವರದಿ
ಕಂಪ್ಲಿ 24: ರಾಜ್ಯದಲ್ಲಿ ಮಳೆ, ಲೋಕ ಕಲ್ಯಾಣಾಕ್ಕಾಗಿ ಸಿಂದೋಳ್ಳು ಬುಡಕಟ್ಟು ಸಮಾಜದ ವೀರನಾಗಮ್ಮ ದೇವತೆಯ ಕುಂಭ ಪೂಜೆ ಮಾಡದ್ದೆವೇ ಎಂದು ಸಿಂದೋಳ್ಳು ಸಮಾಜದ ರಾಜ್ಯ ಅಧ್ಯಕ್ಷ ರಾವುಲ್ ನಾಗಪ್ಪ ಹೇಳಿದರು ಪಟ್ಟಣದಲ್ಲಿ ವೀರನಾಗಮ್ಮ ದೇವತೆಗಳ ಮೆರವಣಿಗೆಗೆ ಮೂರು ವರ್ಷಗಳಿಗೊಮ್ಮೆ ವೀರನಾಗಮ್ಮನವರ ಪ್ರತಿಮೆಗೆ ಬಣ್ಣ ಕೊಡಿಸುವುದು, ಮೆರವಣಿಗೆ, ಕುಂಭಪೂಜೆ ಹಾಗೂ ವಿವಿಧ ಧಾಮೀಕ ಕಾರ್ಯಕ್ರಮಗಳು ನಡೆದವು
ಮೆರವಣಿಗೆಯಲ್ಲಿ ರಾವುಲ್ ನಾಗಪ್ಪ, ಗಾಳೆಪ್ಪ, ಜಂಬಣ್ಣ ಪೋತರಾಜನ ವೇಷಭೂಷಣ ಧರಿಸಿ ಕುಣಿತ ಪ್ರದರ್ಶಿಸಿದರು. ಸಣ್ಣ ಉರುಮೆಗಳನ್ನು ರಾಜಮ್ಮ, ದುರುಗಮ್ಮ, ಜಂಬಲಮ್ಮ, ಹಾಗೂ ಯಲ್ಲಪ್ಪ, ತಿಪ್ಪಯ್ಯ, ದೊಡ್ಡ ಯಲ್ಲಪ್ಪ ಇವರು ದೊಡ್ಡ ಉರುಮೆಗಳ ವಾದನ ಸೇವೆಯನ್ನು ಸಲ್ಲಿಸಿದರು. ಮೆರವಣಿಗೆಯಲ್ಲಿ ಕಳಸಧಾರತಿ, ಉರುಮೆ ವಾದನಗಳು, ಪೋತರಾಜರು ಪಾಲ್ಗೊಂಡಿದ್ದರು.
ಪಟ್ಟಣದ 22ನೇವಾರ್ಡ್ ಸಿಂಧೋಳ್ಳು ಕಾಲೋನಿಯಲ್ಲಿ ವೀರನಾಗಮ್ಮ ದೇವತೆಯ ಕುಂಭಪೂಜೆ ಸೇರಿ ನಾನಾ ಪೂಜಾ ಕಾರ್ಯಕ್ರಮಗಳು ಅರ್ಚಕ ದುರುಗಪ್ಪ ಪೌರೋಹಿತ್ಯದಲ್ಲಿ ಜರುಗಿದವು. ದೇವಸ್ಥಾನದ ಆವರಣದಲ್ಲಿ ರಂಗೋಲಿ ಹಾಕಿ, ವೀರನಾಗಮ್ಮ ಪ್ರತಿಮೆಯನ್ನು ಫಲಪುಷ್ಪಾದಿಗಳಿಂದ ಶೃಂಗರಿಸಿದ್ದರು. ಕಂಪ್ಲಿ ಸೇರಿ ಸುತ್ತಲಿನ ಗ್ರಾಮಗಳ ಸಿಂಧೋಳ್ಳು ಸಮುದಾಯದವರು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು.