ಲೋಕದರ್ಶನ ವರದಿ
ಕಂಪ್ಲಿ 13: ತುಂಗಭದ್ರಾ ನದಿ ಸೇತುವೆಯನ್ನು ಸ್ವಚ್ಚಗೊಳಿಸುವ ಕಾರ್ಯನಿರತವಾಗಿದ್ದ ಪುರಸಭೆ ಜೆಸಿಬಿಯಲ್ಲಿ ಮಂಗಳವಾರ ಬೆಳಿಗ್ಗೆ ಆರಡಿ ಉದ್ದದ ನಾಗರಹಾವು ಹೊಕ್ಕಿತ್ತು.
ಜೆಸಿಬಿಯಲ್ಲಿದ್ದ ನಾಗರ ಹಾವನ್ನು ಉರಗ ತಜ್ಞ ಎಂ.ಮಂಜುನಾಥ ಸುರಕ್ಷಿತವಾಗಿ ಹೊರತೆಗೆದು ಅದನ್ನು ಸಂರಕ್ಷಿಸಿ ಯತಾರೀತಿ ನದಿಗೆ ಬಿಟ್ಟು ಮಾನವೀಯತೆ ತೋರಿದ್ದಾರೆ.
ತುಂಗಭದ್ರಾ ನದಿ ಪ್ರವಾಹಕ್ಕೆ ಬಂದ ಐದಡಿ ಉದ್ದದ ನಾಗರಹಾವು ಅದು ಹೇಗೋ, ನದಿ ಸೇತುವೆ ಮೇಲಿನ ಜಲಸಸ್ಯಗಳನ್ನು ತೆರವುಗೊಳಿಸುವ ಸಮಯದಲ್ಲಿ ಜೆಸಿಬಿ ಕ್ಯಾಬಿನ್ ಸೇರಿಕೊಂಡಿತ್ತು. ಬುಸ್ ಬುಸ್ ಎನ್ನುವ ಸದ್ದು ಕೇಳಿದ ಜೆಸಿಬಿ ಚಾಲಕ ಸಂಗಮೇಶ್ ಸದ್ದು ಬರುವ ಕಡೆಗೆ ಹುಡುಕಿದಾಗ ಹಾವು ಕಂಡು ಬಂದಿದೆ. ತಕ್ಷಣವೇ ಕೆಲಸ ನಿಲ್ಲಿಸಿ ಪೊಲೀಸರ ಗಮನಕ್ಕೆ ತಂದಿದ್ದಾನೆ.
ವಿಷಯ ತಿಳಿದು ಎಂ.ಮಂಜುನಾಥ ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ನಾಗರಹಾವನ್ನು ಹಿಡಿದು ನದಿ ನೀರಿಗೆ ಮರಳಿ ಬಿಟ್ಟಿದ್ದಾರೆ.
ಕಂಪ್ಲಿಯ ಉರಗತಜ್ಞ ಎಂ.ಮಂಜುನಾಥ ಕಳೆದ 20ವರ್ಷಗಳಿಂದ ನಾನಾ ಜಾತಿಯ ಸುಮಾರು ಆರೇಳು ನೂರು ಹಾವುಗಳನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಕಂಪ್ಲಿ ಭಾಗದಲ್ಲಿ ಎಲ್ಲೇ ಹಾವು ಕಂಡರೂ ತಕ್ಷಣ ಇವರಿಗೆ ಪೋನ್ ಮಾಡಿ ಕರೆಯಿಸಿಕೊಳ್ಳುತ್ತಾರೆ. ಈತನಕ ಉಚಿತವಾಗಿ ಹಾವುಗಳನ್ನು ಹಿಡಿದು ಸಾಗಿದ್ದಾಗಿ, ಕಂಪ್ಲಿಯಲ್ಲಿ ನಾನಾ ಜಾತಿಯ ಹಾವುಗಳನ್ನು ಸಂರಕ್ಷಿಸುವ ತಾಣವನ್ನಾಗಿ ರೂಪಿಸಬೇಕು ಎನ್ನುವುದು ಉರಗತಜ್ಞ ಮಂಜುನಾಥ ಅವರ ಆಶಯವಾಗಿದೆ. ಹಾವುಗಳು ಕಂಡುಲ್ಲಿ 7411991318ಗೆ ಕರೆ ಮಾಡಿದಲ್ಲಿ ಉಚಿತವಾಗಿ ಹಾವುಗಳನ್ನು ಹಿಡಿದು ಸಾಗಿಸಲಾಗುವುದು.