ಕಂಪ್ಲಿ: ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆ

ಲೋಕದರ್ಶನ ವರದಿ

ಕಂಪ್ಲಿ 09: ಕ್ರಿಕೆಟ್ ಪಂದ್ಯಾವಳಿಯಲ್ಲಿ ಗಳಿಸಿದ ಮೊದಲನೆ ಬಹುಮಾನದ ಹಣವನ್ನು ದುಂದುವೆಚ್ಚ ಮಾಡದೆ, ಯುವಕರು ನೇರವಾಗಿ ಸ.ಹಿ.ಪ್ರಾ.ಶಾಲೆ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡುತ್ತಿರುವುದು .ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. 

ತಾಲ್ಲೂಕಿನ ಪ್ರಭುಕ್ಯಾಂಪಿನ ಸಕಿಪ್ರಾ ಶಾಲೆ ಮಕ್ಕಳಿಗೆ ಸಮವಸ್ತ್ರ, ಬೆಲ್ಟ್, ನೋಟುಪುಸ್ತಕಗಳನ್ನು ವಿತರಿಸಿ ಮಾತನಾಡಿ, ಫ್ಯಾಕ್ಟ್ರಿಯಲ್ಲಿ ಜರುಗಿದ ಎಫ್ಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಲ್ಲಿಕಾರ್ಜುನ ಪ್ರಾಂಚೈಸಿಯಲ್ಲಿ, ಮೋಹನರೆಡ್ಡಿ, ರವಿ ನಾಯಕತ್ವದಲ್ಲಿ 15,000ರೂ.ಗಳ ಮೊದಲ ಬಹುಮಾನ ಗಳಿಸಿದ್ದು, ಈ ಹಣವನ್ನು ಶಾಲಾ ಮಕ್ಕಳ ಸಮವಸ್ತ್ರ, ಬೆಲ್ಟ್, ನೋಟುಪುಸ್ತಕಗಳಿಗಾಗಿ ವಿನಿಯೋಗಿಸಿದ್ದು ಶ್ಲಾಘನೀಯವಾಗಿದೆ ಎಂದು ಹೇಳಿದರು. 

   90ಮಕ್ಕಳಿಗೆ ಸಮವಸ್ತ್ರ ವಿತರಿಸುವ ಸಂದರ್ಭದಲ್ಲಿ ಮಲ್ಲಿಕಾಜರ್ುನ, ಮೋಹನರೆಡ್ಡಿ, ರವಿ, ಗ್ರಾಪಂ ಸದಸ್ಯರಾದ ಬಿ.ಹೊನ್ನೂರಪ್ಪ, ಟಿ.ತಾಯಣ್ಣ ಜಿ.ಪದ್ಮಾವತಿ, ಮುಖ್ಯಗುರು ಚಂದ್ರಪ್ಪ, ಹನುಮಂತಪ್ಪ, ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟ್ಗಿ ಬಸವರಾಜಗೌಡ, ಬಿ.ಜಾಫರ್, ಕಾಕರ್ಲ ಸುಧಾಕರ, ವೀರಾಂಜನೇಯಲು, ಇಸ್ಮಾಯಿಲ್ ಬೇಗ್ ಸೇರಿ ಅನೇಕರು ಉಪಸ್ಥಿತರಿದ್ದರು.