ಲೋಕದರ್ಶನ ವರದಿ
ಕಂಪ್ಲಿ 14: ನೀರಿನ ರಭಸಕ್ಕೆ ಕಂಪ್ಲಿ ತುಂಗಭದ್ರಾ ಸೇತುವೆಯ ಬ್ರೀಡ್ಜ ಮೇಲಿನ ಪದರು ಮಾತ್ರ ಕಿತ್ತುಹೋಗಿದೆ ಅದರು ತುಂಗಭದ್ರಾ ಸೇತುವೆ ಸುಭದ್ರವಾಗಿದೆ. ಸಾರ್ವಜನಿಕರು ಅಂತಕ ಪಡಬೇಕಿಲ್ಲ ನೀರು ಇಳಿದ ನಂತರ ನೋಡಿ ಸೇತುವೆ ಗುಣಮಟ್ಟ ನೋಡಿಕೊಂಡು ಸಂಚಾರಕ್ಕೆ ಅನುಮತಿ ನೀಡುವ ತನಕ ಸೇತುವೆ ಮೇಲೆ ಸಂಚಾರವನ್ನು ಸ್ಥಗಿತ ಗೊಳಿಸಬೇಕು ಎಂದು ಕೊಪ್ಪಳದ ಲೋಕೋಪಯೋಗಿ ಇಲಾಖೆಯ ಕಾರ್ಯನಿವರ್ಾಹಕ ಅಭಿಯಂತರ ರೇಣುಕಾ ಪಾಟೀಲ್ ಹೇಳಿದರು
ಕೋಟೆಯ ತುಂಗಭದ್ರಾ ನದಿಗೆ ನಿಮರ್ಿಸಿದ ಸೇತುವೆ ಮೇಲಿನ ಸಿಮೆಂಟ್ ಕಿತ್ತು ಹೋಗಿದ್ದನ್ನು ವೀಕ್ಷಿಸಿ ಮಾತನಾಡಿ. ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾದ ನಂತರ ಗಂಗಾವತಿಯ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸೇತುವೆ ಗುಣಮಟ್ಟ ಕುರಿತು ದೃಢೀಕರಣ ಪತ್ರ ನೀಡಲಾಗುವುದು. ನೀರಿನ ಒತ್ತಡದ ರಭಸಕ್ಕೆ ಸೇತುವೆಯ ರಕ್ಷಣಾ ಕಂಬಿಗಳು ಹಾಳಾಗಿದ್ದು ಸರಿಪಡಿಸಬೇಕಾಗಿದೆ. ಸೇತುವೆಯನ್ನು ದುರಸ್ತಿಗೊಳಿಸಿ ನಿರ್ವಹಣೆಗೊಳಿಸಬೇಕಾಗಿದೆ ಅಧಿಕ ಭಾರದ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಜನತೆ ಯಾವುದೇ ಕಾರಣಕ್ಕೂ ಸೇತುವೆ ಮೇಲೆ ಓಡಾಡಬಾರದು, ಸಹಕರಿಸಬೇಕು ಎಂದರು
ಹಂಪಿ ಉಪವಿಭಾಗದ ಎಎಸ್ಪಿ ಡಾ.ಸಿಮಿ ಮರಿಯಮ್ ಜಾಜರ್್, ಸಂಚಾರಕ್ಕೆ ಅನುಮತಿ ನೀಡುವ ತನಕ ಸೇತುವೆ ಮೇಲೆ ಸಂಚಾರವನ್ನು ಸ್ಥಗಿತ ಗೊಳಿಸಬೇಕು ಅಧಿಕ ಭಾರದ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಜನತೆ ಯಾವುದೇ ಕಾರಣಕ್ಕೂ ಸೇತುವೆ ಮೇಲೆ ಓಡಾಡಬಾರದು, ಸಹಕರಿಸಬೇಕು ಅಧಿಕ ಭಾರದ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಸೇತುವೆ ಎರಡು ಬದಿಗೂ ಪೊಲೀಸರು ಬಿಗಿ ಬಂದೋಬಸ್ತು ಒದಗಿಸಿದ್ದಾರೆ.
ಸಿಪಿಐ ಡಿ.ಹುಲುಗಪ್ಪ, ಪಿಎಸ್ಐ ಕೆ.ಬಿ.ವಾಸುಕುಮಾರ್, ಗಂಗಾವತಿಯ ಲೋಕೋಪಯೋಗಿ ಇಲಾಖೆಯ ಎಇಇ ಸೈಯ್ಯದ್ ಮುಷ್ರಫ್ ಅಲಿ, ಸಹಾಯಕ ಅಭಿಯಂತರರಾದ ದೇವೇಂದ್ರಪ್ಪ, ರಾಜಪ್ಪ ಉಪಸ್ಥಿತರಿದ್ದರು.
ನೀರಿನ ರಭಸಕ್ಕೆ ಸೇತುವೆಯ ಮೇಲ್ಪದರ ಕಿತ್ತು ಹೋಗಿದ್ದು, ಎಕ್ಸ್ಫ್ಯಾನ್ಷನ್ ಜಾಯಿಂಟ್ಸ್ ಕಿತ್ತು ಹೋಗಿದೆ ಸದ್ಯಕ್ಕೆ ಸೇತುವೆ ಮೇಲಿನ ಮಾನವ ಮತ್ತು ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಸೇತುವೆ ಎರಡು ಬದಿಗೂ ಪೊಲೀಸರು ಬಿಗಿ ಬಂದೋಬಸ್ತು ಒದಗಿಸಲಾಗಿದೆ