ಲೋಕದರ್ಶನ ವರದಿ
ಕಂಪ್ಲಿ 22: ದೈಹಿಕ ಮತ್ತು.ಮಾನಸಿಕವಾಗಿ ಸದೃಡರಾಗಲು ಪ್ರತಿಯೊಬ್ಬ ಯವಕರಿಗೆ ಕ್ರೀಡೆ ಅವಶ್ಯಕ ಎಂದು ಹೊಸಪೇಟೆ ತಾಪಂ ಉಪಾಧ್ಯಕ್ಷ ಬಿ.ಎಸ್.ಶಿವಮೂರ್ತಿ ಹೇಳಿದರು.
ಶನಿವಾರ ಇಲ್ಲಿನ ಯಲ್ಲಮ್ಮಕ್ಯಾಂಪಿನ ಬಿ.ಎಸ್.ಶಂಕ್ರಪ್ಪ ಇವರ ಹೊಲದಲ್ಲಿ ನಂ.10ಮುದ್ದಾಪುರದ ಯುವ ಜನತೆ ಆಯೋಜಿಸಿದ ಎಂಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆಗಳನ್ನು ಪೋಷಿಸುವಲ್ಲಿ ಪ್ರಗತಿಪರ ಸಂಘಟನೆಗಳು ಮತ್ತು ಯವಜನತೆ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳಂತೆ 5 ವಾರ ಕ್ರಿಕೆಟ್ ಪಂದ್ಯಾವಳಿ ಜರುಗಲಿದೆ ಅಂತಿಮ ಪಂದ್ಯದಲ್ಲಿ ವಿಜಯಿ ತಂಡಕ್ಕೆ ಪ್ರಥಮ ಬಹುಮಾನವಾಗಿ ಶಾಸಕ ಜೆ.ಎನ್.ಗಣೇಶ್ ಅವರು 10,001 ರೂ.ಮತ್ತು ಶೀಲ್ಡ್, ದ್ವಿತೀಯ ಬಹುಮಾನವನ್ನು ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್ 5001ರೂ.ಮತ್ತು ಶೀಲ್ಡ್ ನೀಡದ್ದಾರೆ. ಎಂದು ಹೇಳಿದರು.
ಪಂದ್ಯಾವಳಿ ಚಾಲನಾ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಎಂ.ಎಸ್.ಮಾಂತಮ್ಮ, ಉಪಾಧ್ಯಕ್ಷ ವೈ.ಉಮೇಶ್, ಸದಸ್ಯ ಎ.ತಾಯಣ್ಣ, ಬಂಡಾರಿ ನರಸಣ್ಣ, ಎಚ್.ಮಲ್ಲಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಕಟ್ಟೆ ಮಹಾಂತೇಶ್, ಎಸ್ಡಿಎಂಸಿ ಅಧ್ಯಕ್ಷ ಹುಲುಗಪ್ಪ, ಎಸ್ಡಿಎಂಸಿ ಮಾಜಿ ಉಪಾಧ್ಯಕ್ಷ ವಿ.ವೆಂಕಟೇಶ್, ಸ್ಫೂರ್ತಿ ನವೋದಯ ತರಬೇತಿ ಕೇಂದ್ರದ ಸಂಚಾಲಕ ರಮೇಶ್ ಎನ್.ಶಿವಪೂರ್, ಎಂಪಿಎಲ್ ಯುವಕರಾದ ಬಳೆ ಶೇಖರ್, ಕುರುಬರ ದ್ಯಾವಪ್ಪ, ಮರಾಠಿ ಆನಂದ್, ಉಪ್ಪಾರ ಕೊಟ್ರೇಶ್, ಸುರೇಶ್ ಸೇರಿ ನಂ.10ಮುದ್ದಾಪುರ ಅನೇಕ ಯುವಕರು ಪಾಲ್ಗೋಂಡಿದ್ದರು