ಕಂಪ್ಲಿ: ಆಶ್ರಯ ನಿವೇಶನಗಳಲ್ಲಿಅತಿಕ್ರಮಿಸಿದವರನ್ನು ತೆರವುಗೊಳಿಸಿದ ಶಿವನಗೌಡ ರೆಡ್ಡಿ

ಲೋಕದರ್ಶನ ವರದಿ

ಕಂಪ್ಲಿ 01: ಆಶ್ರಯ ನಿವೇಶನಗಳಲ್ಲಿ ಅನಧಿಕೃತವಾಗಿ ಅತಿಕ್ರಮಿಸಿದವರನ್ನು ತೆರವುಗೊಳಿಸಬೇಕು ಮತ್ತು ಅನರ್ಹರು ಪಟ್ಟಾಗಳನ್ನು ಪಡೆದುಕೊಂಡಿದ್ದು ಸೂಕ್ತವಾಗಿ ಪರಿಶೀಲನೆ ನಡೆಸಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಎಂದು ಹಂಪಾದೇವನಹಳ್ಳಿ ಗ್ರಾಪಂ ಅಧ್ಯಕ್ಷ ಆರ್.ಶಿವನಗೌಡರೆಡ್ಡಿ ಹೇಳಿದರು 

ತಾಲೂಕು ಕಛೇರಿ ಆವರಣದಲ್ಲಿ ತಹಶೀಲ್ದಾರ ಶ್ರೀಶೈಲ ವೈ.ತಳವಾರ ಇವರಿಗೆ ಮನವಿ ಪತ್ರ ಸಲ್ಲಿಸಿದರು. ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಅಂಜನಾಪುರ ಗ್ರಾಮದ ಸವರ್ೇ ನಂಬರ್ 159/1, 159/2 ಮತ್ತು 160ಬಿ/1ರಲ್ಲಿ 1991ರಲ್ಲಿ ಆಶ್ರಯ ನಿವೇಶನಗಳನ್ನು ವಿತರಿಸಲಾಗಿದೆ. ಆದರೆ, ಪಟ್ಟಾದಾರರು ತಮ್ಮ ನಿವೇಶನದ ಅಳತೆಗೂ ಮೀರಿ ಅಕ್ಕಪಕ್ಕದ ನಿವೇಶನಗಳನ್ನು ಸಹ ಅತಿಕ್ರಮಿಸಿದ್ದಾರೆ. ಅಲ್ಲದೆ, ಹಂಪಾದೇವನಹಳ್ಳಿ ಗ್ರಾಪಂವ್ಯಾಪ್ತಿಗೆ ಸೇರದವರು  ಪಟ್ಟಾಗಳನ್ನು ಪಡೆದುಕೊಂಡಿದ್ದಾರೆ.. ಈಗಾಗಲೇ ಕಳೆದ ಒಂದೂವರೆ ವರ್ಷದಿಂದಲೂ ಅಂಜನಾಪುರ ನಿವೇಶನದಲ್ಲಿ ಅತ್ರಿಕ್ರಮಣ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳು ಸೇರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಸಹ. ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಇಲ್ಲ 

ಹೊಸಪೇಟೆ ತಾಲೂಕು ಪಂಚಾಯ್ತಿಯ ಕಾರ್ಯನಿವರ್ಾಹಕ ಅಧಿಕಾರಿಗಳು 2018ರ ನ.20ರಂದು ತಹಶೀಲ್ದಾರರಿಗೆ ಪತ್ರ ಬರೆದು, ಅಂಜನಾಪುರ ಗ್ರಾಮದ 159/1, 159/2 ಮತ್ತು 160/ನಿ/1ರಲ್ಲಿ ಸವರ್ೇ ಮಾಡಿ ನಿವೇಶನದ ಹದ್ದುಬಸ್ತು ಮಾಡಿಕೊಡುವಂತೆ ಕೋರಿದ್ದು, ಈತನಕ ಸವರ್ೇ ಆಗಿಲ್ಲ. ಕೂಡಲೇ ತಹಶೀಲ್ದಾರರು ಮುಂದೆ ಬಂದು ನಿವೇಶನಗಳ ಹದ್ದು ಬಸ್ತು ಮಾಡಿ ಅತಿಕ್ರಮಣವನ್ನು ತೆರವುಗೊಳಿಸಿಕೊಡಬೇಕು ಮತ್ತು ಅರ್ಹ ಫಲಾನುಭವಿಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.       

     ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ ಶ್ರೀಶೈಲ ವೈ.ತಳವಾರ ಮಾತನಾಡಿ, ತಾಲೂಕು ಪಂಚಾಯ್ತಿಯ ಕಾರ್ಯನಿವರ್ಾಹಕ ಅಧಿಕಾರಿಯೊಂದಿಗೆ ಚಚರ್ಿಸಿ, ಶೀಘ್ರದಲ್ಲೇ ತಾಲೂಕು ಪಂಚಾಯ್ತಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

   ಮನವಿ ಪತ್ರ ಸಲ್ಲಿಸುವಲ್ಲಿ ಮುಖಂಡರಾದ ಎನ್.ಮಲ್ಲಿಕಾಜರ್ುನ, ಎನ್.ಬಸವರಾಜ, ಎನ್.ಈರಣ್ಣ, ಶ್ರೀನಿವಾಸ್, ಗ್ರಾಪಂ ಸದಸ್ಯರಾದ ಎನ್.ವೆಂಕಟೇಶ್, ಸಿ.ಯಂಕಪ್ಪ, ಕೆ.ಮಾರುತಿ, ಇ.ಯಂಕಪ್ಪ, ಸಿ.ಹನುಮಯ್ಯ, ವಿ.ರಾಜು, ಜವುಕು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಸೇರಿ ಅನೇಕರು ಉಪಸ್ಥಿತರಿದ್ದರು.