ಕಂಪ್ಲಿ: ರುಕ್ಮಿಣಿ ಪಾಂಡುರಂಗ ಪ್ರಾಣ ಪ್ರತಿಷ್ಠಾಪನೆ: ಸಾಮೂಹಿಕ ವಿವಾಹ

ಲೋಕದರ್ಶನ ವರದಿ

ಕಂಪ್ಲಿ 13: ನವ ದಂಪತಿಗಳು ಪರಸ್ಪರ ಅರ್ಥ್ಯಸಿಕೊಂಡು   ಜೀವನ ಸಾಗಿಸದಾಗ ಮಾತ್ರ ನೆಮ್ಮದಿಯಿಂದ ಜೀವನ ಮಾಡಬಹುದು ಎಂದು  ಶಾಸಕ ಜೆ.ಎನ್.ಗಣೇಶ್ ಹೇಳಿದರು.  ಹೇಳಿದರು.  ತಾಲೂಕಿನ ಮೆಟ್ರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ  ದೇವಸ್ಥಾನದಲ್ಲಿ, ವಿಘ್ನೇಶ್ವರ, ರುಕ್ಮಿಣಿ ಸಮೇತ ಪಾಂಡುರಂಗ ಪ್ರತಿಮೆಗಳಿಗೆ ಹಾಗೂ ಗರುಡಗಂಭಕ್ಕೆ ಪ್ರಾಣಪ್ರತಿಷ್ಠಾಪನ ಅಂಗವಾಗಿ ನಾಲ್ಕು ಜೋಡಿ ಸಾಮೂಹಿಕ ವಿವಾಹ ಜರುಗಿದವು 

ಪಂಡರಾಪುರದ ಚೈತನ್ಯ ಸದ್ಗುರು ಗೋಪಾಲ ವಾಸ್ಕರ್ ಮಹಾರಾಜರು 04 ಜೋಡಿ ವಧು.ವರರಿಗೆ ಆಶರ್ಿ ವದಿಸಿ. ಧರ್ಮ ಜಾಗೃತ ಸಭೆಯಲ್ಲಿ ಆಶೀರ್ವಚನ ನೀಡಿ. ಪಾಂಡುರಂಗನ ಪಂಡರಿ ಸಂಪ್ರದಾಯ ಆಚರಣೆ ಕೇವಲ ದುಶ್ಚಟಗಳನ್ನು ಬಿಡಿಸಲು ಇರುವ ಸಂಪ್ರದಾಯ ಎನ್ನುವ ತಪ್ಪುತಿಳುವಳಿಕೆಯಿಂದ ಮುಕ್ತರಾಗಿ ಮನುಕುಲದ ಉದ್ಧಾರದ ಆಚರಣೆ ಎಂದು ಭಾವಿಸಬೇಕು ಎಂದು ಹೇಳಿದರು. 

   ಗ್ರಾಮದ ಸತ್ಯನಾರಾಯಣ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ರುಕ್ಮಿಣಿ ಪಾಂಡುರಂಗ ಪ್ರತಿಮೆಗಳ ಪ್ರಾಣಪ್ರತಿಷ್ಠಾನ, ನಾಲ್ಕುಜೋಡಿ ಸಾಮೂಹಿಕ ವಿವಾಹ ಜರುಗಿದವು. ಜ್ಞಾನೇಶ್ವರಿಯ 9ರಿಂದ 12ನೇ ಆಧ್ಯಾಯದ ಸಾಮೂಹಿಕ ಪಾರಾಯಣ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಿವಶರಣರು, ರುಕ್ಮಿಣಿ ಪಾಂಡುರಂಗ ಸೇವಾ ಸಮಿಯವರು ಮತ್ತು ಸದ್ಭಕ್ತರು, ಮೆಟ್ರಿ ಸೇರಿ ಸುತ್ತಲಿನ ಗ್ರಾಮಗಳ ಸರ್ವ ಸಮುದಾಯಗಳ ಸದ್ಭಕ್ತರು, ಮುಖಂಡರು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು.