ಲೋಕದರ್ಶನ ವರದಿ
ಕಂಪ್ಲಿ 09: ರಾಜ್ಯದಲ್ಲಿಸಂಮೃದ್ಧವಾಗಿ ಮಳೆ,ಬೆಳೆ ಮತ್ತು ಲೋಕ ಕಲ್ಯಾಣಕ್ಕಾಗಿ ಸ್ಥಳೀಯ ವಾಸವಿ ಯುವಜನ ಸಂಘ, ಆರ್ಯವೈಶ್ಯ ಸಂಘದವರಿಂದ, ಇಲ್ಲಿನ ಕಂಪ್ಲಿ. ಕೋಟೆ ಹೊಳೆ ಆಂಜನೇಯ ದೇವಾಸ್ಥಾನ ಆವರಣದಲ್ಲಿ, ಪರ್ಜನ್ಯ ಹೋಮ ಶೃದ್ದ ಭಕ್ತಿಯಿಂದ ಭಾನುವಾರ ಜರುಗಿತು.ತುಂಗಭದ್ರಾ ನದಿಯಲ್ಲಿ ಬ್ರಾಹ್ಮಣರಿಂದ ಜಪ ನಡೆಯಿತು.
ಬಳಿಕ ದೇಗುಲದ ಆವರಣದಲ್ಲಿ ಪುರೋಹಿತರಾದ ನಾಗರಾಜ ಆಚಾರ್, ರಾಮಾಚಾರ್, ಶ್ರೀನಿವಾಸಅಚಾರ್, ವೆಂಕಟೇಶ ಆಚಾರ್, ಹನುಮೇಶ ಆಚಾರ್ ಅವರ ಪೌರೋಹಿತ್ಯದಲ್ಲಿ ಸಂಭ್ರಮದಿಂದ ಪರ್ಜನ್ಯ ಹೋಮ, ಲಕ್ಷ್ಮಿನರಸಿಂಹ ಹೋಮ ಹಾಗೂ ಇತರ ಪ್ರಜೆ ಕಾರ್ಯಕ್ರಮ ನಡೆದವು.
ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಸುಬ್ರಹ್ಮಣ್ಯಂ ಮತ್ತು ಪದಾಧಿಕಾರಿಗಳು, ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿವಿ,ಸುಬ್ಬಾರಾವ್ ಮತ್ತು ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳಿ, ವಾಸವಿ ವಿದ್ಯಾ ಸಂಸ್ಥೆ, ವಾಸವಿ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ ಪದಾದಿಕಾರಿಗಳು ಮತ್ತು ಪಟ್ಟಣ ಸ್ಭೆರಿದಂತೆವಿವಿಧ ಸಮೀಪದ ಗ್ರಾಮಗಳ ವೈಶ್ಯ ಸಮಾಜದವರು ಪಾಲ್ಗೊಂಡಿದ್ದರು.