ಲೋಕದರ್ಶನ ವರದಿ
ಕಂಪ್ಲಿ 13: ಸ್ಥಳೀಯ ಮುದ್ದಾಪುರ ಅಗಸಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 40ನೇ ವಾಷರ್ಿಕ ಮಹಾಜನ ಸಭೆ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷೆ ಲಕ್ಷ್ಮೀ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ 2018-19 ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 5ಲಕ್ಷ 14ಸಾವಿರ 861 ರೂ ಗಳ ನಿವ್ವಳ ಲಾಭಗಳಿಸಿದೆ ಎಂದರು
ಸಂಘದ ಮುಖ್ಯ ಕಾರ್ಯನಿವರ್ಾಹಕ ಹೆಚ್.ಈರಣ್ಣ ಮಾತನಾಡಿ ಸಂಘದಲ್ಲಿ ಒಟ್ಟು 5770 ಸದಸ್ಯರಿದ್ದು ಸದ್ಯಸರ ಬಂಡವಾಳ 61.87ಲಕ್ಷ ಸರಕಾರದಿಂದ2.20.ಷೇರು ಹೊಂದಿರುತ್ತದೆ ಬೆಳೆ ಸಾಲದಲ್ಲಿ ಶೇ.98 ವಸೂಲಾತಿಯಾಗಿದೆ. ಸಂಘದ 475 ಸದಸ್ಯರು ಸಾಲ ಪಡೆದಿದ್ದಾರೆ. ಪ್ರಸ್ತುತ 230 ಸದಸ್ಯರಿಗೆ ಮಾತ್ರ ಸಾಲ ಮನ್ನಾ ದುಡ್ಡು ಬಂದಿದೆ. 180 ಸದಸ್ಯರಿಗೆ ಸಾಲ ಮನ್ನಾ ದುಡ್ಡು 1.55 ಕೋಟಿ ಬರಬೇಕಾಗಿದೆ. ವ್ಯಾಪಾರ ಅಭಿವೃದ್ಧಿಯಲ್ಲಿ ಶೇ.90 ವಸೂಲಾತಿ ಇರುತ್ತದೆ. ಠೇವಣಿಗಳನ್ನು ಹೆಚ್ಚಿಸಿಕೊಳ್ಳುತ್ತ ಬಂದಿದೆ. 21 ಸ್ವಸಹಾಯ ಗುಂಪುಗಳನ್ನು ಹೊಂದಿದೆ. 4 ಸ್ವಸಹಾಯ ಗುಂಪುಗಳಿಗೆ 7ಲಕ್ಷ ರು.ಗಳ ಸಾಲ ವಿತರಿಸಲಾಗಿದೆ. 31ನೇ ಮಾರ್ಚ್ 2019ರ ಅಂತ್ಯಕ್ಕೆ 1.42 ಕೋಟಿ ರು.ಗಳ ಠೇವಣಿಗಳನ್ನು ಸಂಗ್ರಹಿಸಲಾಗಿದೆ. ಸದರಿ ಸಾಲಿನಲ್ಲಿ 3.15 ಕೋಟಿ ರು.ಗಳ ಪತ್ತೇತರ ವ್ಯವಹಾರ ನಡೆಸಿ 17.24 ಲಕ್ಷ ರು.ಗಳ ವ್ಯಾಪಾರಿ ಲಾಭಗಳಿಸಿರುತ್ತದೆ. ಪ್ರಸ್ತುತ ಸಅಲಿನಲ್ಲಿ 7 ಸದಸ್ಯರಿಂದ ಸುಸ್ತಿ ಸಾಲ 6 ಲಕ್ಷ ರು.ಗಳು ಬರುವುದಿರುತ್ತದೆ. 471 ಜನ ಕಿಸಾನ್ ಕ್ರೆಡಿಟ್ ಕಾಡರ್್ನಡಿಯಲ್ಲಿ ಸಾಲ ಪಡೆದ ಸದಸ್ಯರಿಗೆ ಅಪಘಾತ ವಿಮಾ ಯೋಜನೆ ಅಳವಡಿಸಲಾಗಿರುತ್ತದೆ.. ಸಂಘದ ವ್ಯವಹಾರಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ. ಹೆಚ್ಚಿನ ಸದಸ್ಯರನ್ನು ನೋಂದಾಯಿಸಿಕೊಳ್ಳಲಿದೆ. ಠೇವಣಿಗಳನ್ನು ಸಂಗ್ರಹಿಸಲಿದೆ. ಶೇರು ಧನ ಹಾಗು ಸ್ವಸಹಾಯ ಗುಂಪುಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ನಾಗರಾಜ, ಸದಸ್ಯರಾದ ಎಂ.ವೆಂಕೋಬಣ್ಣ, ಕಂಬತ್ ರಮೇಶ, ಎ.ನಾಗಲಾರೆಪ್ಪ, ಡಿ.ರಂಗಯ್ಯ, ಎ.ಯಲ್ಲಮ್ಮ, ಎನ್.ಮಲ್ಲಿಕಾಜರ್ುನ, ಸಿದ್ದಿಸಾಬ್ ಉಪಸ್ಥಿತರಿದ್ದರು.
ಸಿಬ್ಬಂದಿಯವರಾದ ಎಚ್.ಪರಶುರಾಮ, ಕೆ.ಪ್ರಕಾಶ, ಎನ್.ಮಂಜುನಾಥ, ಕೆ.ಭರತ್ಕುಮಾರ್, ಕೆ.ಸಿದ್ದೇಶ, ಯು.ಮಂಜುನಾಥ, ಮುಖಂಡರಾದ ಕೆ.ಶಂಕ್ರಪ್ಪ, ಕೆ.ವೆಂಕೋಬಣ್ಣ, ಕೆ.ಮನೋಹರ, ಕೆ.ಚಂದ್ರಶೇಖರ, ಡಿ.ಮುರಾರಿ, ಜಿ.ಜಿ.ಆನಂದಮೂತರ್ಿ, ಪಿ.ವೆಂಕನಗೌಡ, ಆದೋನಿ ರಂಗಪ್ಪ, ಜೆ.ಈರಪ್ಪ, ಅಳ್ಳಿ ನಾಗರಾಜ, ಅಯೋದಿ ವೆಂಕಟೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಚೀಟಿ ವ್ಯವಹಾರ ನಡೆಸಲು, ಬೈಲಾ ತಿದ್ದುಪಡಿ ಕುರಿತು ಚರ್ಚಿಸಲಾಯಿತು. ಇಟಿಗಿ ಈರಣ್ಣ ವರದಿ ವಾಚನ ಮಾಡಿದರು. ಸಂಘದ ಸ್ಥಳದಾನಿ ಬಿಂಗಿ ಮುಕ್ಕಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.