ಲೋಕದರ್ಶನ ವರದಿ
ಕಂಪ್ಲಿ 11: ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು, ಸದುಪಯೋಗಪಡಿಸಿಕೊಳ್ಳಿ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಹಿನ್ನಲೆಯಲ್ಲಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ತಹಶೀಲ್ದಾರ ಎಂ.ರೇಣುಕಾ ಹೇಳಿದರು
ತಾಲೂಕಿನ ನೆಲ್ಲೂಡಿ ಗ್ರಾಮದ ಗ್ರಾಪಂ ಆವರಣದಲ್ಲಿ ಜರುಗಿದ, ಪಿಂಚಣಿ ಅದಾಲತ್, ಕಂದಾಯ ಅದಾಲತ್, ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು, ಸೌಲಭ್ಯಗಳನ್ನು ಅರಿತು ಸದುಪಯೋಗಪಡಿಸಿಕೊಳ್ಳಬೇಕು. ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅಜರ್ಿ ಸಲ್ಲಿಸುವ ಅವಧಿಯನ್ನು ಜು.25ರತನಕ ವಿಸ್ತರಿಸಿದ್ದು ರೈತರು ಅಜರ್ಿ ಸಲ್ಲಿಸುವಲ್ಲಿ ಜಾಗೃತಿ ತೋರಬೇಕು. ಗ್ರಾಮ ಲೆಕ್ಕಾಧಿಕಾರಿ ಮನೆ ಮನೆಗೆ ಬಂದಾಗ ಪಿಎಂ ಕಿಸಾನ್ ಅಜರ್ಿ ಸಲ್ಲಿಸಿ, ಇಲ್ಲವೇ ತಾಲ್ಲೂಕು ಕಛೇರಿಗೆ ಆಗಮಿಸಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ನಾನಾ ಪಿಂಚಣಿಗಾಗಿ 49ಅಜರ್ಿಗಳನ್ನು ಸ್ವೀಕರಿಸಲಾಯಿತು. 20 ಅರ್ಜಿಗಳಿಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಸ್ಥಳದಲ್ಲೇ ವಿಲೆವಾರಿ ಮಾಡಲಾಯಿತು. ವೃದ್ಯಾಪ, ವಿಧವಾ ಸೇರಿ ನಾನಾ ಯೋಜನೆಗಳ 5ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಲಾಯಿತು. 9ಜನರ ಪಿಂಚಣಿ ಸ್ಥಗಿತಗೊಂಡಿದ್ದು, ಬ್ಯಾಂಕ್ ಮತ್ತು ಅಂಚೆ ಕಛೇರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಹೊಸದಾಗಿ ಅಜರ್ಿ ಸಲ್ಲಿಸುವಂತೆ ಸಲಹೆ ನೀಡಲಾಯಿತು. ಕಂದಾಯ ಅದಾಲತ್ನಲ್ಲಿ ಹಕ್ಕು ಬದಲಾವಣೆಗಾಗಿ 2 ಅರ್ಜಿಗಳನ್ನು, ದೇವಸ್ಥಾನದ ಭೂಮಿಯನ್ನು ಮ್ಯೂಟೇಷನ್ ಮಾಡಿಕೊಡಲು ಒಂದು ಅಜರ್ಿ, ಜನಸ್ಪಂದನಡಿಯಲ್ಲಿ ಸ್ಮಶಾನ ಒತ್ತುವರಿ ಕುರಿತು 2ಅಜರ್ಿಗಳು ಸೇರಿ ಒಟ್ಟು 53ಅಜರ್ಿಗಳನ್ನು ಸ್ವೀಕರಿಸಲಾಯಿತು.
ತಾಪಂ ಸದಸ್ಯ ಒಬಳೇಶ್, ಉಪ ತಹಶೀಲ್ದಾರ ಬಿ.ರವೀಂದ್ರಕುಮಾರ್, ಶಿರಸ್ತೆದಾರ ರೇಖಾ, ಕಂದಾಯ ನಿರೀಕ್ಷಕ ಎಸ್.ಎಸ್.ತಂಗಡಗಿ, ರಾಘವೇಂದ್ರ, ಪಿಡಿಒ ಅನಿಲ್ಕುಮಾರ್, ಕಾರ್ಯದರ್ಶಿ ಎಸ್.ಎಂ.ಬಸವರಾಜಶಾಸ್ತ್ರಿ, ಗ್ರಾಲೆ ಕೆ.ಎಂ.ಶಿವರುದ್ರಪ್ಪ ಸೇರಿ ಗ್ರಾಪಂ ಸಿಬ್ಬಂದಿ, ತಾಲೂಕು ಆಡಳಿತ ಸಿಬ್ಬಂದಿ, ಗ್ರಾಲೆ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.