ಕಂಪ್ಲಿ: ನೈಸರ್ಗಿಕ ಪೌಷ್ಟಿಕ ಆಹಾರ ಪ್ರದರ್ಶನ

ಲೋಕದರ್ಶನ ವರದಿ

ಕಂಪ್ಲಿ 22: ಇಲ್ಲಿಯ ಬ್ರೈಟ್ ವೇ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನೈಸಗರ್ಿಕ ಪೌಷ್ಟಿಕ ಆಹಾರ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಜರುಗಿತು

ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ  ಶಿವರಾಜ್ ಪ್ರದರ್ಶನಕ್ಕೆ ಚಾಲನೆ ನೀಡಿ ಕಲಬೆರಕೆಯ ಆಹಾರ ಪದಾರ್ಥಗಳು ಸಾಮಾನ್ಯವಾಗಿದ್ದು ಅವುಗಳಲ್ಲಿ ಪೌಷ್ಟಿಕಾಂಶ ಹುಡುಕುವುದು ಅಸಾಧ್ಯವಾಗಿದೆ ಎಂದರು

ಯೋಗ ಗುರು ಬಸವರಾಜ ಮಾತನಾಡಿ, 'ರಾಸಾಯನಿಕ ಸಿಂಪಡಿಸಿ ಬೆಳೆದಿರುವ ಪದಾರ್ಥಗಳನ್ನು ಇಂದು  ಅನಿವಾರ್ಯವಾಗಿ ಸೇವಿಸುತ್ತಿದ್ದೇವೆ. ಜೊತೆಗೆ ಮಕ್ಕಳನ್ನು ಕುರಕಲು ತಿಂಡಿ ದಾಸರನ್ನಾಗಿ ಮಾಡಿದ್ದೇವೆ. ಇನ್ನು ಮುಂದಾದರೂ ಆಹಾರ ಪದ್ಧತಿಯಲ್ಲಿ ಮೊಳಕೆಯೊಡೆದ ಧಾನ್ಯ, ಹಸಿ ಕಾಳು, ತಾಜಾ ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುವಂತೆ' ಸಲಹೆ ನೀಡಿದರು.

ಪ್ರದರ್ಶನದಲ್ಲಿ ವಿವಿಧ ನಮೂನೆ ಮೊಳಕೆ ಕಾಳು, ಹಸಿರು ಸೊಪ್ಪು, ತಾಜಾ ತರಕಾರಿ, ಹಣ್ಣುಗಳು ಮಕ್ಕಳ, ಪೋಷಕರ, ಪಾಲಕರ ಗಮನಸೆಳೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸತ್ಯನಾರಾಯಣ, ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಸಹ ಶಿಕ್ಷಕರಾದ ಚಂದ್ರಶೇಖರ, ರೋಷನ್ ಜಮೀರ್, ಶ್ಯಾಮ್ಸುಂದರರಾವ್, ವೆಂಕಟೇಶ, ರಿಯಾಜ್, ಅನುಪಮಾ ಸೇರಿ ಅನೇಕರಿದ್ದರು.