ಕಂಪ್ಲಿ: ರಾಷ್ಟ್ರೀಯ ಕಾಲುಬಾಯಿ ಲಸಿಕೆ ಅಭಿಯಾನ ಕಾರ್ಯಕ್ರಮ

 ಕಂಪ್ಲಿ 18: ಜಾನುವಾರುಗಳಿರುವ ರೈತರು ವೈರಸ್ನಿಂದ ಕಾಲುಬಾಯಿ ರೋಗ ಬರುವ ಸಾಧ್ಯತೆಯಿರುವದರಿಂದ  ಮುಂಜಾಗ್ರತೆ ಕ್ರಮವಾಗಿ ಜಾನುವಾರುಗಳಿಗೆ ಕಾಲುಬಾಯಿ ರೋಗವನ್ನು ತಡೆಗಟ್ಟಲು ಚಿಕಿತ್ಸೆ  ನೀಡಬೇಕೆಂದರುಪಶು ವೈದ್ಯ ಡಾ.ಯುಗಂಧರ್ ಹೇಳಿದರು 

ಸಮೀಪದ ಗುರುವಾರ ಮಾವಿನಹಳ್ಳಿಯಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯ. ಕೇಂದ್ರ ಸರಕಾರ ಅಡಿಯಲ್ಲಿ ಯೋಜನೆ ಯಾಗಿದ್ದು 14.ರಿಂದ ನವಂಬರ್4ರವರೆಗೆ ಕಾಲು ಬಾಯಿ ಲಸಿಕೆ ನೀಡಲಾಗುವುದು. ತಾಲೂಕಿನಲ್ಲಿ 17,500 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ ಈ ತಾಲೂಕಿನಲ್ಲಿ ಇಲಾಖೆಯ 8 ಜನರ ತಂಡ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಲಸಿಕೆ ನೀಡಿದರು ಜಾನುವಾರುಗಳಿರುವ ರೈತರು  ಲಸಿಕೆಸದುಪಯೋಗಪಡಿಸಿಕೊಳ್ಳಬೇಕು. ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ. ಸುಗ್ಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಸಿ.ವಿರುಪಣ್ಣ, ತಾಲೂಕು ಪಂಚಾಯಿತಿ ಸದಸ್ಯೆ ಉಮಾದೇವಿ ಚಾಲನೆ ನೀಡಿದರು. ಇಲಾಖೆಯ ಶಿವಪ್ಪ ದೇವಕ್ಕಿ, ರಾಮಚಂದ್ರ, ರಾಜೇಂದ್ರಕುಮಾರ ಕದಂ, ನಾಗನಗೌಡ, ಮಾರೆಪ್ಪ, ಸತೀಶ ಇತರಿದ್ದರು.