ಕಂಪ್ಲಿ : ಬೀದಿ ಬದಿ ವ್ಯಾಪಾರಿಗಳಿಗೆ ಲೈಸನ್ಸ್ ಕಾರ್ಡ್ ವಿತರಣೆ

ಲೋಕದರ್ಶನ ವರದಿ

ಕಂಪ್ಲಿ 29: ರಸ್ತೆ ಬೀದಿ ಬದಿ ವ್ಯಾಪಾರಿಗಳು  ಸರ್ಕಾ ರದ ಸೌಲಭ್ಯಗಳನ್ನು ಸದುಪಯೋಗಪಡೆಯುವ  ಮೂಲಕ ಆರ್ಥಿಕವಾಗಿ ಸಭಲರಾಗಬಹುದು . ಕಾಂಗ್ರೆಸ್ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೆ  ಸಹಕರಿಸುತ್ತ ಬಂದಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. 

ಗುರುವಾರ ಇಲ್ಲಿನ ಮಾರುತಿನಗರದ ಸಮುದಾಯ ಭವನದಲ್ಲಿ, ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳಿಯು ಹಮ್ಮಿಕೊಂಡ ಲೈಸನ್ಸ್  ಕಾರ್ಡ್ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ,. ಲೈಸೆನ್ಸ್ ಕಾರ್ಡ್  ಪಡೆದುಕೊಳ್ಳುವ ಮೂಲಕ  ಬಾಂಕ್ಯಗಳಲ್ಲಿ ಸಾಲ ಸೌಲಭ್ಯ ಪಡೆದು ಕೊಳ್ಳಿ. ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸದಾ ನಿಮ್ಮೊಂದಿಗಿರುತ್ತೇನೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಪ್ರಗತಿ ಸಾಧಿಸಬೇಕು ಎಂದರು 

     ಪುರಸಭೆ ಅಧ್ಯಕ್ಷ ಎಂ.ಸುಧೀರ್ 160ಲೈಸನ್ಸ್ ಕಾರ್ಡ್ ಗಳನ್ನು ವಿತರಿಸಿ ಮಾತನಾಡಿ, ರಸ್ತೆ ಸಂಚಾರಕ್ಕೆ ವ್ಯತ್ಯಯವಾಗದಂತೆ ವ್ಯಾಪಾರ ಮಾಡುವಂತೆ ಸಲಹೆ ಸೂಚನೆ ನೀಡಿದರು. 

          ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳಿ ರಾಜ್ಯಾಧ್ಯಕ್ಷ ಭಾಸ್ಕರ ಶ್ರೀನಿವಾಸರಾಜ ಅರಸು ಅಧ್ಯಕ್ಷತೆವಹಿಸಿ ಮಾತನಾಡಿ, 2014 ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿಯ ಕಾಯ್ದೆ ಜಾರಿಗೆಗಾಗಿ 20ವರ್ಷ ಹೋರಾಟ ನಡೆಸಿದ್ದೇವೆ. ಸಂಘಟಿತರಾಗುವ ಮೂಲಕ ಅರ್ಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.  

ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಟಿ.ರಾಮಾಂಜನೇಯ, ಪದಾಧಿಕಾರಿ ಬಿ.ಕೃಷ್ಣ, ಕೆ.ರಂಗಪ್ಪ, ಬಿ.ಖಾಸಿಂವಲಿ, ಸಂಚಾಲಕ ಉದಯಕುಮಾರ್, ಕಾರ್ಯದಶರ್ಿ ರಾಜಣ್ಣ, ಎಸ್.ಆರ್.ರಸೂಲ್ಸಾಬ್, ಹಣ್ಣಿನ ನಾಗರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟ್ಗಿ ಬಸವರಾಜಗೌಡ, ಎಂ.ರಾಜೇಶ್, ಬಾರಿಕರ ನಾಗರಾಜ, ಎಸ್.ಆರ್.ವಲಿ, ಸಮುದಾಯ ಸಂಘಟಕಿ ಎಂ.ವಸಂತಮ್ಮ ಸೇರಿ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ವ್ಯಾಪಾರಿಗಳು ಪಾಲ್ಗೊಂಡಿದ್ದರು. ಅಂಬೇಡ್ಕರ್ ವೃತ್ತದಿಂದ ಬೀದಿ ಬದಿ ವ್ಯಾಪಾರಿಗಳು ಮೆರವಣಿಗೆ ಮೂಲಕ ಸಾಗಿ ಸಮುದಾಯ ಭವನದಲ್ಲಿ ಸಮಾವೇಶಗೊಂಡರು. ಸುಗ್ಗೇನಹಳ್ಳಿ ಶಿಕ್ಷಕ ರಮೇಶ್ ನಿರೂಪಿಸಿದರು.