ಲೋಕದರ್ಶನ ವರದಿ
ಕಂಪ್ಲಿ 13: ಸ್ಥಳೀಯಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶದ ಅಡಿಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಿಂದ "ಅಂತಜರ್ಾಲದ ಉಪಯೋಗಗಳು" ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶದ ಅಡಿಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಿಂದ ಅಂತರ್ಜಾಲದ ಉಪಯೋಗಗಳು" ವಿಷದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಪನ್ಯಾಸಕ ಡಾ. ಪ್ರಕಾಶಗೌಡ ಮಾತನಾಡಿ ವಿದ್ಯಾಥರ್ಿಗಳು ಇಂಟರ್ನೆಟ್ ವಿಷಯಗಳನ್ನು ತಿಳಿದುಕೊಂಡಾಗ ಅಭಿವೃದ್ಧಿಯನ್ನು ಸಾಧಿಸಬಹುದು ಎಂದರು.
ಕಾಲೇಜಿನ ಗ್ರಂಥಪಾಲಕ ಕೆ.ಗುರುಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಸರ್ಚ ಮಾಡುವಾಗ ತುಂಬಾ ಜಾಣ್ಮೆ ವಹಿಸಬೇಕು. ಏಕೆಂದರೆ, ಯಾವುದೇ ಒಂದು ವಡರ್್ ಟೈಪ್ ಮಾಡಿದಾಗ ಅದು ಅಗತ್ಯಕ್ಕಿಂತ ಹೆಚ್ಚು ಹೆಚ್ಚು ವಿಷಯಗಳನ್ನು ತೋರಿಸುತ್ತದೆ. ಆದರೆ ನಮಗೆ ಯಾವ ವಿಷಯ ಅಗತ್ಯವಿದೆ ಅಥವಾ ಯಾವ ವಿಷಯ ನಮಗೆ ಸಂಭಂದಪಟ್ಟಿದೆ ಎಂಬುದನ್ನು ನಾವೇ ನಿರ್ಧರಿಸಬೇಕು. ಇತ್ತೀಚಿನ ದಿನಗಳಲ್ಲಿ ಕಾಗದರಹಿತ ಸಮಾಜ ಆಗಿರುವುದರಿಂದ ಪ್ರತಿಯೊಬ್ಬ ವಿದ್ಯಾಥರ್ಿಯು ಅಂತರ್ಜಾಲದ ಬಳಕೆ ತಿಳುವಳಿಕೆ ಅಗತ್ಯವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ. ನಾಗೇಂದ್ರಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥ ಇಂದ್ರಿಪಿ ಮಲ್ಲಿಕಾಜರ್ುನ, ಸಂಚಾಲಕ ಡಾ.ಕೃಷ್ಣ.ಜೆ ಕನ್ನಡ ವಿಭಾಗದ ಮುಖ್ಯಸ್ಥ ಪ್ರವೀಣ್ಕುಮಾರ್ ಎಂ. ಎನ್ ಕನ್ನಡ ಪ್ರಾಧ್ಯಾಪಕ ಡಾ. ಅನ್ನಪೂರ್ಣ ಗುಡುದೂರು ಅತಿಥಿ ಉಪನ್ಯಾಸಕ ಕೆ.ಶಿವಪ್ಪ, ಮೈನುದ್ಧೀನ್ ಬಾಷ., ಸಿ.ಡಿ.ಕುಮಾರ, ದಶರಥ, ಗ್ರಂಥಾಲಯ ಸಹಾಯಕ ಮಲ್ಲಿಕಾರ್ಜುನ ಗುಡುದೂರು .ಬಿ.ಕಾಂ. 6ನೇ ಸೆಮಿಸ್ಟರ್ ವಿದ್ಯಾಥರ್ಿನಿ ಉಮಾಮಹೇಶ್ವರಿ ಪ್ರಾರ್ಥನೆ ಬಿ.ಕಾಂ. 4ನೇ ಸೆಮಿಸ್ಟರ್ವಿದ್ಯಾರ್ಥಿನಿಯರಾದ ಮಧುಶ್ರಿ, ರೇಖಾ ಸ್ವಾಗತ ಬಿ.ಕಾಂ. 6ನೇ ಸೆಮಿಸ್ಟರ್ ವಿದ್ಯಾಥರ್ಿನಿಯರಾದ ಅಮ್ರೀನ್, ರಜೀಯಾ ಕಾರ್ಯಕ್ರಮವನ್ನು ನಿರೂಪಿಸಿದರು.