ಕಂಪ್ಲಿ: ಆಂತರಿಕ ಗುಣಮಟ್ಟ ಭರವಸಾ ಕೋಶದ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ

ಕಂಪ್ಲಿ 11: ದೇಶದ ಪ್ರಗತಿಗೆ ಸೇವಾ ಮನೋಧರ್ಮ ಮತ್ತು ಕೃತಜ್ಞತಾ ಭಾವನೆಗಳನ್ನು ಅಳವಡಿಸಿಕೊಳ್ಳುವಲ್ಲಿ ವಿದ್ಯಾಥರ್ಿಗಳು ಮುಂದಾಗಬೇಕು ಎಂದು ಕೊಪ್ಪಳದ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಹೇಳಿದರು.

ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದಿಂದ 2018-19ರ ಜ್ಞಾನ ದಾಸೋಹದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ದೇಶದ ಪ್ರಗತಿ ಕೇವಲ ಶಿಕ್ಷಣದ ಮೇಲೆ ಆಧಾರಿತವಾಗಿಲ್ಲ. ಶಿಕ್ಷಣ ಪಡೆದವರು ದೇಶದ ಪ್ರಗತಿಗೆ ಶ್ರಮಿಸುವ ಅಗತ್ಯತೆ ಇದೆ..

     ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ ಕೆ.ನಾಗೇಂದ್ರಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಅಂತರಿಕ ಗುಣಮಟ್ಟ ಭರವಸಾ ಕೋಶವು ಶಿಕ್ಷಣಕ್ಕೆ ಪೂರಕವಾಗಿದ್ದು, ಕಾಲೇಜಿನ ನ್ಯಾಕ್ ಮರುಮೌಲ್ಯ ಮಾಪನಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪಠ್ಯದೊಡನೆ ಕೌಶಲ್ಯ ವೃದ್ದಿಸುವ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ರಾಜ್ಯದ ಪ್ರಮುಖ ಕೌಶಲ್ಯ ಅಭಿವೃದ್ದಿ ಸಂಸ್ಥೆಗಳಾದ ಹುಬ್ಬಳ್ಳಿ ದೇಶಪಾಂಡೆ ಸಂಸ್ಥೆ, ಬೆಂಗಳೂರಿನ ಉನ್ನತಿ ಕೌಶಲ್ಯ ಅಭಿವೃದ್ದಿ ಸಂಸ್ಥೆ ಸೇರಿ ಜಿಲ್ಲೆಯ ನಾನಾ ಸಂಸ್ಥೆಗಳಿಂದ ತರಬೇತಿ ನೀಡಲಾಗುತ್ತಿದೆ. ಕಾಲೇಜಿನ ವಿದ್ಯಾಥರ್ಿಗಳು ಖಾಸಗಿ ಕಂಪನಿಗಳಲ್ಲಿ ಉದ್ಯೋಗಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

     ಇತಿಹಾಸ ಪ್ರಾಧ್ಯಾಪಕ ಇಂದ್ರಿಪಿ ಮಲ್ಲಿಕಾಜರ್ುನ, ಹಿರಿಯ ಶ್ರೇಣಿ ಗ್ರಂಥಪಾಲಕ ಕೆ. ಗುರುಮೂತರ್ಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಜ್ಮಾ ಟಿ.ಎಮ್.ಆರ್., ಕನ್ನಡ ಪ್ರಾಧ್ಯಾಪಕ ಎಂ.ಎನ್.ಪ್ರವೀಣ್ಕುಮಾರ್, ಡಾ. ಅನ್ನಪೂರ್ಣ ಗುಡುದೂರು ಸೇರಿ ಅತಿಥಿ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. 

ನಂತರ ಅರ್ಥಶಾಸ್ತ್ರ ವಿಭಾಗದಿಂದ 'ಅರ್ಥಶಾಸ್ತ್ರದ ಲಾಭದ ಸಿದ್ದಾಂತಗಳು' ಕುರಿತು ಕೊಪ್ಪಳದ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ, ಇತಿಹಾಸ ವಿಭಾಗದ 'ಕನರ್ಾಟಕ ಶಾಸನಗಳ ಮಹತ್ವ ಕುರಿತು ಕನಕಗಿರಿಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ ಬಿ.ವೆಂಕಟೇಶ್, ವಾಣಿಜಯ ಶಾಸ್ತ್ರ ವಿಭಾಗದಿಂದ 'ಸರಕು ಮತ್ತು ಸೇವಾ ತೆರಿಗೆ ಕಾಯ್ದೆ' ಕುರಿತು ಹಗರಿಬೊಮ್ಮನಹಳ್ಳಿಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಹಾಯಕ ಪ್ರಧ್ಯಾಪಕ ವಸಂತಕುಮಾರ್ ಉಪನ್ಯಾಸ ನೀಡಿದರು.