ಕಂಪ್ಲಿ: ಅಚ್ಚುಕಟ್ಟು ಪ್ರದೇಶದ ಭೂಮಿಗೆ ನೀರು ಒದಗಿಸದ್ದಿದ್ದರೆ ಉಗ್ರ ಹೋರಾಟಕ್ಕೆ ಸೂಚನೆ

ಲೋಕದರ್ಶನ ವರದಿ

ಕಂಪ್ಲಿ 21: ಮುಂಗಾರು ಹಂಗಾಮಿಗೆ ತುಂಗಭದ್ರ ಬಲದಂಡೆಯ ಕೆಳಮಟ್ಟದ  ಎಂ.1 ವಿತರಣಾ ಕಾಲುವಿಗೆ ನೀರು ಬಿಟ್ಟು 10ದಿನ ಕಳೆದರು 03ಕೀಮಿ ಮಾತ್ರ ನೀರು ತಲುಪಿವೆ. ಅದರೆ ಅಧಿಕೃತ ಅಚ್ಚುಕಟ್ಟು  ಪ್ರದೇಶದ  ಕೆಳಗಿನ ರೈತರ ಭೂಮಿಗೆ ನೀರು ತಲುಪಿಲ್ಲ. 

ಎಂ.1 ವಿತರಣಾ ಕಾಲುವೆಯ ನೀರನ್ನು ಅನಧಿಕೃತ ರೈತರು ತಮ್ಮ ಗದ್ದೆಗಳಿಗೆ  ಭಯವಿಲ್ಲದೆ ನೀರು ಪಡೆಯುತ್ತಿದ್ದಾರೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಕಾಲುವೆಗೆ ಭೇಟಿ ನೀಡಿ ಅಧಿಕೃತ ಅಚ್ಚುಕಟ್ಟು ಪ್ರದೇಶದ ಭೂಮಿಗೆ ನೀರು ಒದಗಿಸದ್ದಿದ್ದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ನೆಲ್ಲೂಡಿ ಕೊಟ್ಟಾಲ್ನ ಎಂ.1 ವಿತರಣಾ ನಾಲೆಯ ಸತತ ನೀರಾವರಿ ರೈತರ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.     

     ಎಂ.1ವಿತರಣಾ ನಾಲೆ 0ದಿಂದ 10ಕಿ.ಮೀ.ನಷ್ಟಿದ್ದು, ಸತತ ನೀರಾವರಿ ನಿಯಮದನ್ವಯ 19ತೂಬುಗಳ ಮೂಲಕ ಸುಮಾರು 2100ಎಕರೆ ಅಚ್ಚುಕಟ್ಟು ಕೃಷಿಭೂಮಿಗೆ ನೀರುಣಿಸಬೇಕಾಗಿದೆ. ಇದೇ ಆ.11ರಂದು ಟ್ರೀಪ್ಲಾನ್ ಪ್ರಕಾರ 42ಕ್ಯೂಸೆಕ್ಸ್ನಷ್ಟು ನೀರು ಹರಿಸಿದ್ದರೂ ಕೇವಲ ಎರಡೂವರೆ ಕಿ.ಮೀ.ನಷ್ಟು ಮಾತ್ರ ನಾಲೆಗೆ ನೀರು ಹರಿದಿದೆ. ನಾಲೆಯ ಮುಂದಿನ ಭಾಗಕ್ಕೆ ನೀರು ಹರಿದಿಲ್ಲ. ನಾಲೆಯ ಮೇಲ್ಭಾಗದ 0ಕಿ.ಮೀ.ನಿಂದ 1.900ಕಿ.ಮೀ.ಭಾಗದತನಕ ಅನಧಿಕೃತ ಪ್ರದೇಶದ ರೈತರು ಸೈಫಾನ್ ಪೈಪುಗಳನ್ನು ಅಳವಡಿಸಿಕೊಂಡಿದ್ದಾರೆ.    

ಎಂ.1 ವಿತರಣಾ ನಾಲೆಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು 2016ರಿಂದಲೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಇದೇ ಜು.15ರಂದು ಮತ್ತು ಆ.19ರಂದು ಜಿಲ್ಲಾಧಿಕಾರಿಗಳನ್ನು ಖುದ್ಧಾಗಿ ಭೇಟಿ ಮಾಡಿ, ಎಂ1 ವಿತರಣಾ ನಾಲೆಗೆ ನೀರು ಹರಿಯುತ್ತಿಲ್ಲ ಎಂದು ಮನವಿಪತ್ರ ಸಲ್ಲಿಸಲಾಗಿದೆ. ತಂಡವೊಂದನ್ನು ಕಳುಹಿಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಡಿಸಿಯವರು ಮೌಖಿಕ ಸಮಾಧಾನ ಹೇಳಿದ್ದಾರೆಯೇ ಹೊರತು ಯಾವ ಕ್ರಮ ಕೈಗೊಂಡಿಲ್ಲ ಎಂದರು. 

ನೀರಾವರಿ ನಿಗಮದ ಎಇಇ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಎಂ1 ವಿತರಣಾ ನಾಲೆಗೆ ನೀರು ಹರಿಯದೆ, ಅನಧಿಕೃತ ಕೃಷಿ ಭೂಮಿಗೆ ನೀರು ಹರಿಯಲು ಕಾರಣವಾಗಿದೆ. ಕೂಡಲೇ ಅನಧಿಕೃತ ಭೂಮಿಗೆ ನೀರು ಹರಿಸುವುದನ್ನು ತಡೆಗಟ್ಟಬೇಕು. ಎಂ.1ವಿತರಣಾ ನಾಲೆಯ ಅಚ್ಚುಕಟ್ಟು ಪ್ರದೇಶದ ಭೂಮಿಗೆ ನೀರು ಒದಗಿಸಬೇಕು. 

ಕೂಡಲೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ತಪ್ಪಿದಲ್ಲಿ ಎಲ್ಎಲ್ಸಿಯ ಎಂ1 ತೂಬನ್ನು ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಂ.1 ವಿತರಣಾ ನಾಲೆಯ ಸತತ ನೀರಾವರಿ ರೈತರ ಸಂಘದ ಅಧ್ಯಕ್ಷ ಜಿ.ರಾಮರಾವ್, ಕಾರ್ಯದಶರ್ಿ ಕೆ.ಪೂರ್ಣಚಂದ್ರರಾವ್, ಖಜಾಂಚಿ ಶ್ರೀನಿವಾಸ್, ಜಡೇಗೌಡ, ಟಿ.ಸೋಮಿರೆಡ್ಡಿ, ಕೆ.ಕೃಷ್ಣಯ್ಯ, ಶ್ರೀನಿವಾಸ್, ಎಂ.ನಾರಾಯಣ, ಅಂಜಿನಿ, ಹನುಮಯ್ಯ, ಹೊನ್ನೂರಪ್ಪ ಸೇರಿ ರೈತರನೇಕರು ಎಚ್ಚರಿಕೆ ನೀಡಿದ್ದಾರೆ.