ಲೋಕದರ್ಶನ ವರದಿ
ಕಂಪ್ಲಿ 26: ಪ್ರಭುಕ್ಯಾಂಪಿನಲ್ಲಿರುವ ಜನರು ವಸತಿ ನಿವೇಶನ ರಹಿತರ ಇದ್ದರೆ ಮಾತ್ರ ಆಶ್ರಯ ಯೋಜನೆಯಡಿಯಲ್ಲಿ ಮನೆಗಳನ್ನು ಪಡೆಯಬಹುದು ಎಂದು ನಂ.10 ಮುದ್ದಾಪುರ ಗ್ರಾಪಂ ಪಿಡಿಒ ಬೀರಲಿಂಗ ಹೇಳಿದರು.
ಇಲ್ಲಿನ ಪ್ರಭುಕ್ಯಾಂಪಿನ ಅಂಬೇಡ್ಕರ್ ಭವನದಲ್ಲಿ, ಗ್ರಾಪಂ ಸದಸ್ಯ ಹೊನ್ನೂರಪ್ಪ, ಸದಸ್ಯೆ ಪದ್ಮಾವತಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ವಾಡರ್್ಸಭೆಯಲ್ಲಿ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಗುಟಕಾ, ತಂಬಾಕು ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ ಬಾಲಕಾರ್ಮಿಕ ಬಾಲ್ಯ ವಿವಾಹ, ಮಹಿಳೆಯರ ವರದಕ್ಷಿಣೆ ಕಿರುಕುಳ, ಮಹಿಳಾ ಸಾಗಾಣಿಕೆ ಕುರಿತು ಸಕಾಲದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ, ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಲ್ಲಿ 1098ಕ್ಕೆ ಉಚಿತ ದೂರವಾಣಿ ಮೂಲಕ ಮಾಹಿತಿ ತಲುಪಿಸುವಲ್ಲಿ ಗ್ರಾಮಸ್ಥರು ಮುಂದಾಗಬೇಕು ಎಂದರ ಸಭೆಯಲ್ಲಿ ವಾಡರ್್ ಸದಸ್ಯ ಬಿ.ಹೊನ್ನೂರಪ್ಪ ಮಾತನಾಡಿ, ವಸತಿ ಯೋಜನಡಿಯಲ್ಲಿ ಅರ್ಹ ಸಲ್ಲಿಸಿದ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಪ್ರಭುಕ್ಯಾಂಪಿನಲ್ಲಿ ಚರಂಡಿ ನಿರ್ಮಿಸಬೇಕು, ಚರಂಡಿ ಸ್ವಚ್ಚಗೊಳಿಸಬೇಕು, ಬೀದಿ ದೀಪ ವ್ಯವಸ್ಥೆ ಕಲ್ಪಿಸಬೇಕು. ರಸ್ತೆಗಳ ಅಕ್ಕಪಕ್ಕದಲ್ಲಿ ವಿಪರೀತ ರೀಜರ್ ಬೇಲಿ, ಅರಣ್ಯಗಿಡಗಳು ಬೆಳೆದು ರಸ್ತೆಯನ್ನು ಅತಿಕ್ರಮಿಸಿದ್ದು ಕಡಿದು ಒರಣಗೊಳಿಸಬೇಕು. ರಸ್ತೆಗೆ ಮಣ್ಣು ಹಾಕಿಸಿ ದುರಸ್ತಿಗೊಳಿಸಬೇಕು. ನಾಲ್ಕು ವೈಯಕ್ತಿಕ ಶೌಚಾಲಯಗಳ ಹಣ ಪಾವತಿಸಬೇಕು. ಹೊಸ ವಿದ್ಯುತ್ ಕಂಬಗಳಿಗೆ ದೀಪಗಳ ವ್ಯವಸ್ಥೆ ಒದಗಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಪ್ರಭು ಕ್ಯಾಂಪಿನ ಸಕಿಪ್ರಾ ಶಾಲೆ ಮುಖ್ಯಗುರು ಎಸ್.ಚಂದ್ರಪ್ಪ ಮಾತನಾಡಿ, ಶಾಲೆ ಮಕ್ಕಳಿಗೆ ನಾನಾ ಕ್ರೀಡೋಪಕರಣಗಳನ್ನು ಒದಗಿಸುವಂತೆ, ಶೌಚಾಲಯ, ಮೂತ್ರಾಲಯ ನಿಮರ್ಿಸಿಕೊಡುವಂತೆ, ನೇಗಿಲು ಯುವ ಬಳಗದ ಮೇಷಕ್ ರಾಜ್ ಅವರು ಪ್ರಭು ಕ್ಯಾಂಪಿನಲ್ಲಿ ಗ್ರಂಥಾಲಯ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸಿದರು.
ಗ್ರಾಪಂ ಮಾಜಿ ಸದಸ್ಯೆ ವೆಂಕಟಲಕ್ಷ್ಮಿ ಮಾತನಾಡಿ, 2010ರಲ್ಲಿ 32ಎಕರೆಯಲ್ಲಿನ ನಿವೇಶನಗಳು ಫಲಾನುಭವಿಗಳ ಹೆಸರಿನಲ್ಲಿ ನೋಂದಣಿಯಾಗಿದ್ದು, ಪಟ್ಟಾ ವಿತರಿಸಬೇಕಾಗಿದೆ. ಸದ್ರಿ ಭೂಮಿಯನ್ನು ಕಲ್ಗುಡಿ ಬಸವರಾಜಪ್ಪ ಇವರಲ್ಲಿ ಖರೀದಿಸಿದ್ದು ಈ ಭೂಮಿಯನ್ನು ಗ್ರಾಮಠಾಣ ವ್ಯಾಪ್ತಿಗೆ ಸೇರಿಸಬೇಕೆಂದರು.
ಸಭೆಯಲ್ಲಿ ನರೇಗಾ ಯೋಜನೆ, ಕುಡಿವ ನೀರು, ವಸತಿ ನಿವೇಶನ ರಹಿತರ, ಸ್ವಚ್ಛ ಭಾರತ ಯೋಜನೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ಮೂಲಭೂತ ಸೌಕರ್ಯ ಹಾಗೂ ವಸತಿಗಾಗಿ ಅನೇಕರು ಅರ್ಜಿ ಸಲ್ಲಿಸಿ ಕುಂದುಕೊರತೆ ಮಂಡಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ವೈ.ಉಮೇಶ್, ಸದಸ್ಯರಾದ ಎ.ತಾಯಣ್ಣ, ಹೊನ್ನೂರಪ್ಪ, ಮುಖಂಡರಾದ ಜಿ.ಸುರೇಶ್, ಜಿ.ಪದ್ಮಾವತಿ, ವೆಂಕಟಲಕ್ಷ್ಮಿ ರಾಮಾಂಜನೇಯಲು, ಡ್ರೈವರ್ ಗೋಪಾಲ್, ಪೆದ್ದಣ್ಣ ಸೇರಿ ಪ್ರಭುಕ್ಯಾಂಪಿನ ಜನತೆ ಉಪಸ್ಥಿತರಿದ್ದರು. ಜೂ.24ರಂದು ನಂ.10ಮುದ್ದಾಪುರದ ಕೆಂಚಮ್ಮ, ಬೀರಪ್ಪ ದೇವಸ್ಥಾನಗಳ ಆವರಣದಲ್ಲಿ, ನಂ.5ಬೆಳಗೋಡ್ ಹಾಳ್ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಜೂ.25ರಂದು ಕಣವಿ ತಿಮ್ಮಲಾಪುರದ ಹಳೆ ಶಾಲೆ ಹತ್ತಿರ ವಾರ್ಡ್ ಸಭೆಗಳು ಜರುಗಿದವು.