ಕಂಪ್ಲಿ: ಬಳ್ಳಾರಿ ವಿಭಜನೆ ಮಾಡದಿದ್ದಲ್ಲಿ ಉಗ್ರ ಹೋರಾಟ

ಲೋಕದರ್ಶನ ವರದಿ

ಕಂಪ್ಲಿ 01: ಸಿ.ಎಂ. ಬಿ.ಎಸ್.ಯಡಿಯೂರಪ್ಪನವರು ಹೋಸಪೇಟೆಯನ್ನು ವಿಜಯನಗರ ಜಿಲ್ಲೆ ಮಾಡುವ ಕುರಿತು ಬಳ್ಳಾರಿ ಜಿಲ್ಲೆಯ ಸಂಸದರು ಮತ್ತು ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಗೃಹ ಕಚೇರಿ ಕೃಷ್ಣದಲ್ಲಿ ಸಿ.ಎಂ.ರವರು, ಸಂಸದರು, ಶಾಸಕರನ್ನು 2ರಂದು ಸಭೆ ಕರೆದಿರುವುದು ಸಂತೋಷದ ಸಂಗತಿಯಾಗಿದೆ. ಕಂಪ್ಲಿಯ ಮುಖಂಡರು ಪಕ್ಷತೀತವಾಗಿ ಹರ್ಷವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಪುರಸಭೆ ಸದಸ್ಯ ಸಿ.ಆರ್.ಹನುಮಂತ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಸಂಸದರು ಮತ್ತು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಸಭೆ ಕರೆದು ನಂತರ  ತಡಮಾಡದೆ(ಹೊಸಪೇಟೆ)  ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದರಿಂದ ಕಂಪ್ಲಿಯ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ತುಂಬಾ ಅನುಕೂಲವಾಗುತ್ತದೆ  ತಡಮಾಡದೆ ಸಿಎಂ.ರವರು ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಿ ಇಲ್ಲದಿದ್ದರೆ ಕಂಪ್ಲಿ ಬಂದಮಾಡಿ ಉಗ್ರವಾದ ಹೋರಾಟ ಹಮ್ಮೀಕೊಳ್ಳಲಾಗುವುದು ಎಂದು ಒತ್ತಾಯಿಸಿದರು     

ಕಂಪ್ಲಿ ಕೆಪಿಸಿಸಿ ಸದಸ್ಯ ಬಿ.ನಾಗೇಶ್ವರರಾವ್, ಪ್ರಮುಖರಾದ ಎ.ರೇಣುಕಪ್ಪ, ಕೆ.ತಿಮ್ಮಯ್ಯ, ಎಂ.ಗೋಪಾಲ, ವಿ.ವಿದ್ಯಾಧರ, ಡಿ.ಶ್ರೀಧರ ಶ್ರೇಷ್ಠಿ, ಶಿವರಾಮ್ ಸಿಂಗ್, ಕರಡಿವಲಿಸಾಬ ಸಿ.ಬಸವರಾಜಸೇರಿ ಅನೇಕರಿದ್ದರು