ಕಂಪ್ಲಿ: ಚನ್ನವೀರ ಶರಣರ ಬಳಗದಿಂದ ಫೆ.7, 8ರಂದು ಉಚಿತ ನೇತ್ರ ಶಸ್ತ್ರ ಚಿಕಿತ್ಸೆ

ಲೋಕದರ್ಶನ ವರದಿ

ಕಂಪ್ಲಿ 30: ಇಲ್ಲಿನ ಕೊಟ್ಟೂರೇಶ್ವರ ಡಾ.ಜಂಬುನಾಥ ಗೌಡರ ಹೆರಿಗೆ ಆಸ್ಪತ್ರೆಯಲ್ಲಿ  ಶ್ರೀಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದಿಂದ, ಸಂಘಟನಾ ಸಭೆ ಗುರುವಾರ ನಡೆಯಿತು ಈಸಭೆಯಲ್ಲಿ ಶ್ರೀಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಕಾರ್ಯದಶರ್ಿ ಡಾ.ಜಂಬುನಾಥ ಗೌಡ್ರು ಮಾತನಾಡಿ. ಶ್ರೀಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದಿಂದ, ಫೆ.7 ಮತ್ತು 8ರಂದು 20ನೇ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಕಂಪ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಏಪರ್ಾಡಿಸಲಾಗಿದೆ .ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೇವಾಶ್ರಮ ಕಣ್ಣಿನ ಆಸ್ಪತ್ರೆ ತಂಡದವರಿಂದ ಉಚಿತವಾಗಿ ಹೊಲಿಗೆರಹಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಲೆನ್ಸ್ ಅಳವಡಿಸುವ ವಿನೂತನ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಕಂಪ್ಲಿಯ ಹಾಗೂ ಸುತ್ತ ಮುತ್ತಲ ಗ್ರಾಮೀಣ ಭಾಗದ ಜನತೆ ಮತ್ತು ತಾಲ್ಲೂಕಿನ ಗ್ರಾಮದ ಜನತೆ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.

300ದಿಂದ 400ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೆರವೇರಿಸುವ ಗುರಿ ಹೊಂದಿದ್ದೇವೆ. ಕಣ್ಣಿನ ಪರೀಕ್ಷೆ ಮತ್ತು ಪೊರೆ ಬಂದವರನ್ನು ಫೆ.6ರಂದು ಪರೀಕ್ಷೆ ಮಾಡಿ ನೋಂದಣಿ ಮಾಡಿಕೊಳ್ಳಲಾಗುವುದು. ಫೆ.7 ಮತ್ತು 8ರಂದು ಇಲ್ಲಿನ ಸಕರ್ಾರಿ ಆಸ್ಪತ್ರೆಯಲ್ಲಿ ಎರಡು ದಿನ ಶಸ್ತ್ರಚಿಕಿತ್ಸೆ ಜರುಗಿಸಲಾಗುವುದು. ಹೆಸರು ನೋಂದಾಯಿಸಲು 70906 30323 ಹಾಗೂ 96326 46431 ಸಂಪಕರ್ಿಸುವಂತೆ ಕೋರಿದರು. ಸಭೆಯಲ್ಲಿ ಬಳಗದ ಅಧ್ಯಕ್ಷ ಜಿ.ಲಿಂಗನಗೌಡ, ಪದಾಧಿಕಾರಿಗಳಾದ ಡಾ.ಎಸ್.ಮಂಜುನಾಥ, ಡಾ.ಕೆ.ಶ್ರೀನಿವಾಸರೆಡ್ಡಿ, ಡಾ.ಚಂದ್ರಶೇಖರ ಕಲ್ಗುಡಿ, ಪಿ.ಮೂಕಯ್ಯಸ್ವಾಮಿ, ಟಿ.ಕೊಟ್ರೇಶ್, ಕೆ.ಎಂ.ವೀರಯ್ಯಸ್ವಾಮಿ ಸೇರಿ ಇತರರಿದ್ದರು. ಹೆಸರು ನೋಂದಾಯಿಸಲು  ಈನಂಬರಿಗೆ ಸಂಪಕರ್ಿಸುವಂತೆ 70906 30323 ಹಾಗೂ 96326 46431 ತಿಳಿಸಿದರು