ಲೋಕದರ್ಶನ ವರದಿ
ಕಂಪ್ಲಿ 18: ಗಂಗಾವತಿಯಿಂದ 25ಕಿ.ಮೀ.ಅಂತರದಲ್ಲಿನ ದರೋಜಿಗೆ ಕಂಪ್ಲಿ ಮೂಲಕ ರೈಲ್ವೆ ಹಳಿ ಜೋಡಣೆ ಮಾಡಬೇಕೆಂದು ಇಲ್ಲಿನ ಕನರ್ಾಟಕ ಜನಶಕ್ತಿ ರಾಮಸಾಗರ ಶಾಖೆಯ ಅಧ್ಯಕ್ಷ ಹಾದಿಮನಿ ಕಾಳಿಂಗವರ್ಧನ ಒತ್ತಾಯಿಸಿದರು
ಹೊಸಪೇಟೆಯಿಂದ ಹರಿಹರಕ್ಕೆ ಹೋಗುವ ರೈಲಿಗೆ ಹಸಿರು ನಿಶಾನೆ ತೋರಿಸಲು ಆಗಮಿಸಿದ್ದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಅವರಿಗೆ, ರಾಮಸಾಗರದ ಕನರ್ಾಟಕ ಜನಶಕ್ತಿ ಸಂಘಟನೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು ಕಂಪ್ಲಿ ನೂತನ ತಾಲ್ಲೂಕು ಆಗಿದೆ ಕಂಪ್ಲಿ ಮತ್ತು ಸುತ್ತಲಿನ ಗ್ರಾಮಗಳ ಜನತೆಗೆ ಸಹಾಯವಾಗಲಿದೆ. ರೈಲ್ವೆ ಹಳಿ ಜೋಡಣೆಯಿಂದಾಗಿ ಕಂಪ್ಲಿ ಸೇರಿ ಸುತ್ತಲಿನ ಗ್ರಾಮಗಳ ಸವರ್ಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ. ರೈಲ್ವೆ ಹಳಿ ಜೋಡಣೆಯಿಂದಾಗಿ ಹುಬ್ಬಳ್ಳಿಯಿಂದ ಗಂಗಾವತಿ, ಕಂಪ್ಲಿ, ದರೋಜಿ, ಬಳ್ಳಾರಿ ಮತ್ತು ಗುಂತಕಲ್ ಮಾರ್ಗ ದೊರೆತು ಸಂಚಾರಕ್ಕೆ ಅನುಕೂಲವಾಗಲಿದೆ. ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿಗೆ ರೈಲ್ವೆ ಹಳಿ ಜೋಡಣೆ ಮಾಡಬೇಕು ಎಂದು ಡಾ.ಎಚ್.ಪಿ.ಶರಣಪ್ಪ, ಸಿ.ಸೋಮಶೇಖರ್, ವಿಶ್ವನಾಥ್, ಟಿ.ನಿರಂಜನಯ್ಯಸ್ವಾಮಿ ಸೇರಿ ಅನೇಕರಿದ್ದರು.