ಕಂಪ್ಲಿ: ಈಶ್ವರ ದೇವರ ಹೂವಿನ ರಥೋತ್ಸವ

ಲೋಕದರ್ಶನ ವರದಿ

ಕಂಪ್ಲಿ 22: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಈಶ್ವರ ದೇವರ 9ನೇ ವರ್ಷದ ಹೂವಿನ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.

ಈಶ್ವರ ದೇವಸ್ಥಾನದಿಂದ ಆರಂಭಗೊಂಡ ಹೂವಿನ ತೇರು ಗ್ರಾಮದ ಮುಖ್ಯರಸ್ತೆ ಮೂಲಕ ಎದುರು ಬಸವಣ್ಣನ ಕಟ್ಟೆಯವರೆಗೆ ಸಾಗಿ ಪುನಃ ಸ್ವಸ್ಥಾನಕ್ಕೆ ಮರಳಿತು.

ತೇರು ಸಾಗುವಾಗ ನೆರೆದಿದ್ದ ಭಕ್ತರು ಉತ್ತತ್ತಿ ತೂರಿ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ತಾಷರಾಂಡೋಲು, ಡೊಳ್ಳು, ಮಂಗಲವಾದ್ಯ, ಹಗಲುವೇಷ ಕಲಾವಿದರು, ಜನಪದ ತಂಡದವರು ಭಾಗವಹಿಸಿದ್ದರು.

ಗಂಗೆಸ್ಥಳ ಮಹೋತ್ಸವ, ಈಶ್ವರ ದೇವರಿಗೆ ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು

ಶ್ರೀ ನವಲಗುಂದ ನಾಗಲಿಂಗ ಶರಣರ ಪುರಾಣ ಪ್ರವಚನ ಮಹಾಮಂಗಲಗೊಂಡಿತು. ಲಿಂಗದಹಳ್ಳಿ ವೇದಮೂರ್ತಿ  ಸೋಮಯ್ಯಶಾಸ್ತ್ರಿ ಪುರಾಣ ಪ್ರವಚನಕ್ಕೆ ಅಗ್ರಹಾರ ಸೋಮಶೇಖರಯ್ಯ ಗವಾಯಿಗಳ ಹಾರ್ಮೋನಿಯಂ, ಚನ್ನದಾರ ಅಂಜಿನಪ್ಪ ತಬಲಾಸಾಥ್ ನೀಡಿದರು. ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿಯವರು, ಸಕಲ ಸದ್ಭಕ್ತರಿದ್ದರು.