ಕಂಪ್ಲಿ: ಬಿ.ಜೆ.ಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಲೋಕದರ್ಶನ ವರದಿ

ಕಂಪ್ಲಿ 23: ಆಂದ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜಗನ್ಮೋಹನ್ ರೆಡ್ಡಿ  ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದಕ್ಕಾಗಿ ಕಂಪ್ಲಿಯ ವ್ಯೆ ಎಸ್.ಆರ್ ಅಭಿಮಾನಿಗಳು ಮತ್ತು ಬಿ.ಜೆ.ಪಿ ಕಾರ್ಯಕರ್ತರು ಗುರುವಾರ ಪಟಾಕಿ ಸಿಡಿಸಿ  ವಿಜಯೋತ್ಸವ ಆಚರಿಸಿದರು. 

ಈ ಸಂದರ್ಭದಲ್ಲಿ ವ್ಯೆ ಎಸ್.ಆರ್.ಮತ್ತು ರೆಡ್ಡಿ  ಸಮುದಾಯದ ಯುವ ಮುಖಂಡ ಟಿ.ವಿ.ಸುದರ್ಶನರಡ್ಡಿ ಮಾತನಾಡಿ,  ವೈಎಸ್ಆರ್ ಕಾಂಗ್ರೆಸ್ಸ್ನ ಜಗಮೋಹನರೆಡ್ಡಿಯವರು ಮತದಾರರ ಆಶರ್ಿವಾದದಿಂದ ಹೆಚ್ಚುಸ್ಥಾನಗಳಿಸಿ ಪ್ರಥಮವಾಗಿ ಆಂದ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೆಚ್ಚು ಸಂಸದ  ಸ್ಥಾನಗಳನ್ನು ಗಳಿಸಿದ್ದಾರೆ. 0ಎಂದರು 

ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಿಂದ ಅಂಬೇಡ್ಕರ್ ವೃತ್ತದತನಕ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮದ ವಿಜಯೋತ್ಸವ ಮೆರವಣಿಗೆ ಜರುಗಿಸಿ ಗಮನಸೆಳೆದರು. ಈ ಸಂದರ್ಭದಲ್ಲಿ ರಡ್ಡಿ ಸಮುದಾಯದ ಭಾಸ್ಕರರಡ್ಡಿ, ಶ್ರೀನಿವಾಸರಡ್ಡಿ, ಸುರೇಂದ್ರರಡ್ಡಿ, ಮೋಹನರಡ್ಡಿ, ಐ.ಶರಣಗೌಡ, ಮೋಹನರಡ್ಡಿ ಶ್ರೀನಿವಾಸರಡ್ಡಿ, ಚಿಟ್ಟಿ, ಎಸ್.ದೇವೇಂದ್ರ ಗೌಡ, ಕೃಷ್ಣರಡ್ಡಿ, ವೈ.ಕೊಂಡಾರಡ್ಡಿ, ಅಂಕಿರಡ್ಡಿ, ಪ್ರಭಾಕರ ರಡ್ಡಿ, ಜಯರಾಮರಡ್ಡಿ, ಚಂದ್ರಕಾಂತರಡ್ಡಿ, ಸಂದೀಪರಡ್ಡಿ ಸೇರಿ ರಡ್ಡಿ ಸಮುದಾಯದವರು, ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.