ಲೋಕದರ್ಶನ ವರದಿ
ಕಂಪ್ಲಿ 25: ಸ್ಥಳೀಯ 19ವಾರ್ಡ್ ನಲ್ಲಿ ತಿಂಗಳಿಗೆ ಒಂದು ಸಲ ನೀರು ಬರುತ್ತಿದು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ ವಾಡರ್ಿನ ಜನತೆ ಪುರಸಭಾಡಳಿತ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದಿಸುತ್ತಿಲ್ಲ ಸಮರ್ಪಕ ಕುಡಿವ ನೀರು ಒದಗಿಸುವ ಕ್ರಮ ಕೈಗೊಳ್ಳದಿದ್ದಲ್ಲಿ ಪುರಸಭೆ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದುಮಹಿಳೆಯರು ಖಾಲಿ ಕೊಡ ಪ್ರದಶರ್ಿಸಿದರು.
19ನೇವಾಡರ್್ನ ದುರುಗಮ್ಮ ಗುಡಿ, ಕೋದಂಡರಾಮ ಗರಡಿ ಮನೆ ಬಳಿ ಸೇರಿ ತಳವಾರ ಓಣಿಗಳಲ್ಲಿ ಕುಡಿವ ನೀರಿನ ತತ್ವಾರವಿದೆ. ಚರಂಡಿ ಸ್ವಚ್ಚತೆಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ಸುಮಾರು 200ಮನೆಗಳವರು ಕುಡಿವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸಂಧಿಯಾದ ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ದುನರ್ಾತ ಬೀರುತ್ತಿದೆ ಎಂದರು
ಪುರಸಭೆ ಸದ್ಯಸ ಸುರೇಶ ಈವಾಡರ್ಿನಲ್ಲಿ ಇವತ್ತಿನವರೆಗೂ ಬಂದಿಲ್ಲ ತಿಂಗಳಿಗೊಮ್ಮೆ ನೀರು ಬರುತ್ತದೆ. ಪುರಸಭಾಡಳಿತ ಸಮರ್ಪಕ ನೀರು ಒದಗಿಸುವಲ್ಲಿ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದೆ. ಸಮರ್ಪಕ ಕುಡಿವ ನೀರು ಪೂರೈಸುವಂತೆ ಪುರಸಭಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೂ ಮತ್ತು ಪುರಸಭೆ ಸದ್ಯಸ ಸುರೇಶ ತಿಂಗಳಿಗೊಮ್ಮೆ ನೀರು ಬರುತ್ತದೆ. ಪುರಸಭಾಡಳಿತ ಸಮರ್ಪಕ ನೀರು ಒದಗಿಸುವಲ್ಲಿ ನಿರ್ಲಕ್ಷ್ಯಧೋರಣೆ ಗಮನಕ್ಕೆ ಅನೇಕ ಬಾರಿ ತಂದಿದ್ದರೂ ವ್ಯರ್ಥವಾಗಿದೆ.
ಬೋರ್ ನೀರಿನ ವ್ಯವಸ್ಥೆಯೂ ಇಲ್ಲ. ನೆರೆಯ 18ನೇವಾಡರ್್ ಮುಲ್ಲಾರ ಓಣಿಯಲ್ಲಿ ಬೋರ್ ನೀರು, ಕುಡಿವ ನೀರಿನ ವ್ಯವಸ್ಥೆ ಉತ್ತಮವಾಗಿದ್ದು ಯತೇಚ್ಛ ನೀರು ಪೂರೈಸಲಾಗುತ್ತಿದೆ.
ವಾರದೊಳಗಾಗಿ ಸಮರ್ಪಕ ಕುಡಿವ ನೀರು ಒದಗಿಸುವ ಕ್ರಮ ಕೈಗೊಳ್ಳದಿದ್ದಲ್ಲಿ ಪುರಸಭೆ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು 19ನೇವಾರ್ಡ್ ರೇಣುಕಮ್ಮ, ಎಲ್.ಲಕ್ಷ್ಮಿ, ಎಲ್.ಹುಲಿಗೆಮ್ಮ, ಸುಪುತ್ರಮ್ಮ, ಕಾಮಾಕ್ಷಮ್ಮ, ಎಸ್.ನಾಗಮ್ಮ, ಶಿರುಗುಂಪಿ ಲಕ್ಷ್ಮಮ್ಮ, ರೇಣುಕಮ್ಮ, ನೇತ್ರಾ, ಸುವರ್ಣಮ್ಮ, ಮಲ್ಲಮ್ಮ, ದ್ಯಾವಮ್ಮ, ಅಂಜಿನಮ್ಮ, ಯು.ರತ್ನಮ್ಮ ಸೇರಿ ಅನೇಕ ಮಹಿಳೆಯರು, ಉಡೇಗೋಳ್ ಅಶೋಕ್, ಕೆ.ಚಂದ್ರು, ಪಂಪಾಪತಿ, ಎಲ್.ಮಾರೆಣ್ಣ, ಯಮುನಪ್ಪ, ಹನುಮೇಶ್, ಶಂಕ್ರಪ್ಪ, ವೀರೇಶ್ ಸೇರಿ ಅನೇಕರು ಎಚ್ಚರಿಕೆ ನೀಡಿದ್ದಾರೆ. ಕುಡಿವ ನೀರು, ಬ್ಲಾಕ್ ಆದ ಚರಂಡಿ ದುರ್ವವ್ಯಸ್ಥೆ ಸರಿಪಡಿಸುವಂತೆ ಅನೇಕ ಬಾರಿ ಪುರಸಭೆ ಸದಸ್ಯನ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಸೌಲಭ್ಯಕ್ಕಾಗಿ ಆಗ್ರಹಿಸಿ ಆ.1ರಂದು ಪುರಸಭೆಗೆ ಮುತ್ತಿಗೆ ಹಾಕಲಾಗುವುದು