ಲೋಕದರ್ಶನ ವರದಿ
ಕಂಪ್ಲಿ 21: ಇಲ್ಲಿನ ವಿನಾಯಕ ನಗರದಲ್ಲಿನ ಕಮ್ಮ ಸಮುದಾಯದ ಮುಖಂಡರಾದ ಚಿಗುರುಪಾಟಿ ಸಾಯಿಪ್ರಸಾದ್ ಅವರ ನಿವಾಸದಲ್ಲಿ ಶುಕ್ರವಾರ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರಧಾನಿ ಮೋದಿ ಕುರಿತು ಮಾತನಾಡುವ ಯೋಗ್ಯತೆಯಾಗಲಿ ಕಾಂಗ್ರೆಸ್ಸಿಗರಿಗಿಲ್ಲ. ಕೇವಲ ಒಂದು ರಾಜ್ಯದ ಆಡಳಿತವನ್ನು ಉಳಿಸಿಕೊಳ್ಳಲಾಗದ ಸಿದ್ಧರಾಮಯ್ಯ ದೇಶದ ಪ್ರಧಾನಿ ಮೋದಿಯನ್ನು ಟೀಕಿಸುವ ಯೋಗ್ಯತೆ ಇಲ್ಲ. ರಾಹುಲ್ಗಾಂಧಿ ಅಪ್ರಬುದ್ಧ ನಾಯಕನಾಗಿದ್ದು, ಮೋದಿಯನ್ನು ಸಾಕ್ಷಾಧಾರ ರಹಿತವಾಗಿ ಟೀಕಿಸುತ್ತಿದ್ದಾರೆ. ಇದರಿಂದ ತಮ್ಮ (ಕಾಂಗ್ರೆಸ್)ಪಕ್ಷಕ್ಕೆ ನಷ್ಟವೇ ಹೊರತು ಬಿಜೆಪಿಗೆ ಕಿಂಚಿತ್ತೂ ದಕ್ಕೆಯಾಗುವುದಿಲ್ಲ.
ಖಾಲಿ ಇಲ್ಲದ ಸಿಎಂ ಸ್ಥಾನಕ್ಕೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮೂಲಕ, ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಮಾಜಿ ಸಿಎಂ ಸಿದ್ದರಾಮಯ್ಯ ಹುನ್ನಾರ ಎಸಗಿದ್ದಾರೆ ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಸಿದ್ದರಾಮಯ್ಯ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದಾರೆಂದರು ಸಿದ್ಧರಾಮಯ್ಯ ಒಳಗೊಂದು, ಹೊರಗೊಂದು ಆಟ ಆಡ್ತಿದ್ದಾರೆ. ಜೆಡಿಎಸ್ನ್ನು ಮಟ್ಟಹಾಕುವುದೇ ಕಾಂಗ್ರೆಸ್ ತಂತ್ರವೂ ಆಗಿದೆ.
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ರಾಜ್ಯದಲ್ಲಿ 20ಕ್ಕೂ ಅಧಿಕ ಹಾಗೂ ದೇಶದಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ. ಶ್ರೀರಾಮರಂಗಾಪುರ, ಕೃಷ್ಣನಗರ ಕ್ಯಾಂಪ್, ಕೊಳಗಲ್, ಕಂಪ್ಲಿಗಳಲ್ಲಿ ಬಿಜೆಪಿ ಪರ ಮತಯಾಚಿಸಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚಿಗುರುಪಾಟಿ ಸಾಯಿ ಪ್ರಸಾದ್, ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ಕೊಡಿದಲ ರಾಜು, ಅಲ್ಲು ಆಶ್ವತ್ಥನಾಯ್ಡು, ನರಸೆಟ್ಟಿ ಕೊಂಡಯ್ಯ, ಜಯಪ್ರಕಾಶ್, ಪಾರ್ಥಸಾರಥಿ, ಭಾಸ್ಕರ ಚೌದ್ರಿ, ಸ್ಲಂ ಮೋರ್ಚಾ ರಾಜ್ಯ ಕಾರ್ಯದಶರ್ಿ ಎನ್.ರಾಮದಾಸ್, ಬೆಂಗಳೂರಿನಕಾರ್ಪೊರೇಟಗಳಾದ ಶೇಖರಬಾಬು, ವೆಂಕಟೇಶ್ ಸೇರಿ ಅನೇಕರು ಪಾಲ್ಗೊಂಡಿದ್ದರು.