ಕಂಪ್ಲಿ: ಪರಸ್ಪರ ಕಾರು ಡಿಕ್ಕಿ: ಸಣ್ಣ ಪುಟ್ಟ ಗಾಯ

ಕಂಪ್ಲಿ 24: ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯ ವೈಷ್ಣವಿ ಲೇ ಹೌಟ್ ಹತ್ತಿರ ತಿರುವುರುವುದರಿಂದ ಎರಡು ಕಾರುಗಳು  ಮುಖಾಮುಖಿ ಡಿಕ್ಕಿ ಹೊಡೆದ ಹಿನ್ನಲೆ ಎರಡು ಕಾರುಗಳ ಮುಂಭಾಗ ನುಜ್ಜುಗಿದೆ.ಕೆಂಪು ಕಾರು ಚಾಲಕ ಗಾಯಗೊಂಡಿದ್ದಾನೆ ಅವನ್ನು ಅಸ್ಫತ್ರೆಯಲ್ಲಿ.ಚಿಕಿತ್ಸೆ ಪಡೆಯತ್ತಿದ್ದಾನೆ.ಬಿಳಿ ಕಾರಿನ ಚಾಲಕ ಸೇರಿಇನ್ನು3ಜನ  ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿವೆ ಈಘಟನೆ ಗುರುವಾರ ಜರುಗಿದೆ.

ಇಲ್ಲಿನ ಶಿವಶಕ್ತಿ ಅಕ್ಕಿಗಿರಣಿ ಬಳಿಯ ತಿರುವಿನಲ್ಲಿ ಹೊಸಪೇಟೆಯಿಂದ ಕಂಪ್ಲಿಗೆ ಬರುತ್ತಿದ್ದ ಕೆಂಪು ಮಾರುತಿ ಸುಜುಕಿ ವ್ಯಾಗನರ್ ಕಾರು ನಿಯಂತ್ರಣ ತಪ್ಪಿ ಚಲಿಸಿದ ಪರಿಣಾಮವಾಗಿ, ಕಂಪ್ಲಿಯಿಂದ ಹೊಸಪೇಟೆಗೆ ಸಾಗುತ್ತಿದ್ದ ಬಳಿ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದೆ. ಕೆಂಪು ಕಾರಿನ ಚಾಲಕ ಸುರೇಶ್, ಬಿಳಿ ಕಾರಿನ ಚಾಲಕ ಕಿರಣ್ ಸೇರಿ, ಮೂವರು ಸಹ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹೊಸಪೇಟೆಯ ಆಸ್ಪತ್ರೆಗೆ ದಾಖಲಾಗಿಸಿದೆ. ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.