ಕಂಪ್ಲಿ: ನಾಡೋಜ ಬುರ್ರಕಥಾ ಈರಮ್ಮನವರ ಪುಣ್ಯಸ್ಮರಣೆ

ಲೋಕದರ್ಶನ ವರದಿ

ಕಂಪ್ಲಿ 12: ನಾಡೋಜ ಬುರ್ರಕಥಾ ಈರಮ್ಮನವರ 5ನೇವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.  ಈರಮ್ಮ ಸ್ಮಾರಕ, ಸೌಲಭ್ಯ ಒದಗಿಸಬೇಕೆಂದು ಸರ್ಕಾರಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಡವಲಿ ಮಲ್ಲಿಕಾರ್ಜುನಪ್ಪ ಒತ್ತಾಯಿಸಿದರು 

ಸೋಮವಾರ ಸಂಡೂರು ತಾಲ್ಲೂಕಿನ ಹಳೆ ದರೋಜಿ ಗ್ರಾಮದ ಬುಡ್ಗ ಜಂಗಮ ಕಲಾಗ್ರಾಮದಲ್ಲಿ, ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಷನ್ ಆಯೋಜಿಸಿದ, ಬುರ್ರಕಥಾ ದರೋಜಿ ಈರಮ್ಮನವರ 5ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿ, ನಾಡೋಜ ದರೋಜಿ ಈರಮ್ಮನವರು ಬುರ್ರಕಥಾ ಲೋಕಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾಗಿದ್ದು,     ಮುಖ್ಯವಾಗಿ ಶಾಸಕ ಈ.ತುಕರಾಂ ಅವರು ದರೋಜಿ ಈರಮ್ಮನವರ ಪುತ್ಥಳಿ ಸ್ಥಾಪಿಸುವುದಾಗಿ, ಹೇಳಿದ್ದರು ಸ್ಮಾರಕಕ್ಕೆ ರಸ್ತೆ ನಿರ್ಮಿಸುವುದಾಗಿ ಹೇಳಿದ್ದ ಭರವಸೆಗಳೆಲ್ಲ ಹುಸಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರ    ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಷನ್ ಅಧ್ಯಕ್ಷ ವಿ. ರಾಮಾಂಜಿನೇಯ(ಅಶ್ವರಾಮು) ಮಾತನಾಡಿ, ಬುರ್ರಕಥಾ ಈರಮ್ಮನವರ ತಮ್ಮನಾದ ದಿವಂಗತ ಅಶ್ವ ಬಾಲಸ್ವಾಮಿಯ ಮಗನು ಅನಾರೋಗ್ಯದ ನರಳುತ್ತಿರುವುದರಿಂದ ಈ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸಲಾಗಿದೆ ಎಂದರು.

     ಈರಮ್ಮನವರ ಪುಣ್ಯಸ್ಮರಣೋತ್ಸವದಲ್ಲಿ ಕನರ್ಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬುರ್ರಕಥಾ ಶಿವಮ್ಮ, ಅಶ್ವಿ ಪಾರ್ವತಮ್ಮ, ಮಾರೆಮ್ಮ, ಅಶ್ವ ಸಾಲಮ್ಮ, ಬಿಚ್ಚಮ್ಮ ಇವರಿಂದ ಬುರ್ರಕಥಾ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು.

     ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಗಲುವೇಷ ಕಲಾವಿದರಾದ ಯಡವಲಿ ಮಲ್ಲಿಕಾರ್ಜುನಪ್ಪ, ಅಶ್ವ ರಾಮಣ್ಣ, ಕಲಾವಿದರಾದ ಯಡವಲಿ ಗಂಗಾಧರಪ್ಪ, ಯಡವಲಿ ಮಾರೆಪ್ಪ, ಅಶ್ವ ದೊಡ್ಡಲಾಲಪ್ಪ, ಯಡವಲಿ ಶಂಕರ್ ಕುಮಾರ್, ಅಶ್ವ ನಾಗರಾಜ ಸೇರಿ ಕಲಾವಿದರು ಪಾಲ್ಗೊಂಡಿದ್ದರು.