ಕಂಪ್ಲಿ: ಎನ್.ಗಣೇಶ್ ಅಮಾನತ್ತು ಹಿಂಪಡೆ ಸಿಹಿ ವಿತರಿಸಿ ಸಂಭ್ರಮಾಚರಣೆ

ಲೋಕದರ್ಶನ ವರದಿ

ಕಂಪ್ಲಿ 31: ಶಾಸಕ ಜೆ.ಎನ್.ಗಣೇಶ್ ಅವರ ಮೇಲಿನ ಪಕ್ಷದ ಅಮಾನತ್ತು ವಾಪಸ್ಸು ಪಡೆದಿದ್ದಕ್ಕೆ   ಇಲ್ಲಿನ ಅತಿಥಿಗೃಹ ಆವರಣದಲ್ಲಿ ಕಾಂಗ್ರೆಸ್ ಬ್ಲಾಕ್ ಸಮಿತಿ ಪದಾಧಿಕಾರಿಗಳು ಮತ್ತು ಮುಖಂಡರು, ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಿಸಿ,ದರುಜೆ.ಎನ್.ಗಣೇಶ್ ಅವರ ಮೇಲಿನ ಪಕ್ಷದ ಅಮಾನತ್ತು ವಾಪಸ್ಸು ಪಡೆದಿದ್ದಕ್ಕೆ  ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತಸ ತಂದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಹನುಮಂತ ಮಾತನಾಡಿ.ಜೆ.ಎನ್.ಗಣೇಶ್ ಅವರ ಮೇಲಿನ ಪಕ್ಷದ ಅಮಾನತ್ತು ವಾಪಸ್ಸು ಪಡೆದಿದ್ದಕ್ಕೆ  ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತಸ ತಂದಿದೆ  ಹೇಳಿದರು. 

ಗಣೇಶ್ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಮೇಲಿನ ಪಕ್ಷದ ಅಮಾನತ್ತು ವಾಪಸ್ಸು ಪಡೆದಿದ್ದು ಸ್ವಾಗತಾರ್ಹವಾಗಿದೆ. ಶಾಸಕರು ಇನ್ನಷ್ಟು ಆಸಕ್ತಿಯಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗಲಿದೆ. ಪಕ್ಷದ ಅಮಾನತ್ತು ವಾಪಸ್ಸು ಪಡೆಯಲು ಸಹಕರಿಸಿದ ಕಾಂಗ್ರೆಸ್ಸಿನ ವರಿಷ್ಠರು, ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖಂಡರಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದು ಹೇಳಿದರು. 

     ಈ ಸಂದರ್ಭದಲ್ಲಿ ಐಸಿಸಿ ಸದಸ್ಯ ಮೆಹಮೂದ್, ಕೆ.ಚಂದ್ರಶೇಖರ್, ಬ್ಲಾಕ್ ಉಪಾಧ್ಯಕ್ಷ ಅಬ್ದುಲ್ ವಾಹಿದ್, ಪ್ರಚಾರ ಸಮಿತಿ ಸಂಚಾಲಕ ಎನ್.ಹಬೀಬ್ ರೆಹಮಾನ್, ಮುಖಂಡರಾದ ಎ.ರೇಣುಕಪ್ಪ, ಎಂ.ಹುಲುಗಪ್ಪ, ಶೆಕ್ಷಾವಲಿ, ಜಿ.ರಾಜ, ನ್ಯಾಮದ್ಸಾಬ್, ಕೆ.ತಿಮ್ಮಯ್ಯ, ಎಂ.ಗೋಪಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.