ನವದೆಹಲಿ 06: "ಟೀಂ ಇಂಡಿಯಾದ ಯುವ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ಭವಿಷ್ಯದಲ್ಲಿ ಭಾರತದ ಸ್ಟಾರ್ ಆಟಗಾರನಾಗಲಿದ್ದಾರೆ" ಭಾರತದ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದರು.
ಇಂಗ್ಲೆಂಡ್ ವಿರುದ್ಧದ ನಡೆದ ಮೊದಲ ಟಿ 20 ಕ್ರಿಕೆಟ್ ನಲ್ಲಿ ವೃತ್ತಿಜೀವನದ ಎರಡನೇ ಶತಕ ಗಳಿಸಿರುವ ರಾಹುಲ್ ಪಂದ್ಯದಲ್ಲಿ ಭಾರತ ಗೆಲ್ಲಲು ಕಾರಣಕರ್ತರಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ಉತ್ತಮ ಪ್ರದರ್ಶನ ನಿಡುತ್ತಿರುವ ರಾಹುಲ್ ಭವಿಷ್ಯದಲ್ಲಿ ದೊಡ್ಡ ಸ್ಟಾರ್ ಆಟಗಾರರೆನಿಸಿಕೊಳ್ಳಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ಇತ್ತೀಚೆಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಕೆ.ಎಲ್. ರಾಹುಲ್ ಅವರ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದರು.
ಕುಲ್ದೀಪ್ ಯಾದವ್ ಸಹ ತಮ್ಮ ಉತ್ತಮ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಜೋ ರೂಟ್, ಬೆನ್ಸ್ಟೋರಂತಹ ಪ್ರಬಲ ಎದುರಾಳಿಗಳನ್ನು ಸಹ ಇವರು ಹಿಮ್ಮೆಟ್ಟಿಸಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.
ಭಾರತ ಕ್ರಿಕೆಟ್ ತಂಡವನ್ನು ರೈಡ್ ಗೆ ಸಿದ್ದವಾಗಿರುವ ಕಾರ್ ಗೆ ಹೋಲಿಸಿರುವ ಗವಾಸ್ಕರ್ ವಿರಾಟ್ ಕೊಹ್ಲಿ ಚಾಲಕನಾಗಿರುವ ಈ ಕಾರ್ ಉತ್ತಮ ಸ್ಥಿತಿಯಲ್ಲಿದೆ ಎಂದಿದ್ದಾರೆ. ನಾಯ ಕೊಹ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು ಜಯದ ಹಾದಿಯಲ್ಲಿ ಸಾಗುತ್ತಿದ್ದಾರೆ. ಪ್ರಸ್ತುತ ಭಾರತ ತಂಡ ಉತ್ತಮವಾಗಿರುವ ಆಟಗಾರರನ್ನು ಒಳಗೊಂಡಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಂದು ಭಾರತ-ಇಂಗ್ಲೆಂಡ್ ನಡುವೆ ಎರಡನೇ ಟಿ 20 ಪ<ದ್ಯ ನಡೆಯಲಿದ್ದು ಭಾರತಕ್ಕೆ ಸರಣಿ ಗೆಲ್ಲುವ ತವಕವಾದರೆ ಮೊದಲ ಪಂದ್ಯ ಸೋತ ಆಂಗ್ಲರಿಗೆ ಸರಣಿ ಸಮಗೊಳಿಸಿಕೊಳ್ಳುವ ಬಯಕೆ ಇದೆ.