ಜನಾರ್ಧನ ರೆಡ್ಡಿಯಿಂದ ಭಾಜಪ ನಾಯಕರು ಹಣದ ಸಹಾಯ ಪಡೆದಿರುವ ಸಾಧ್ಯತೆ ಇದೆ: ಜೆಡಿಎಸ್

ಬೆಂಗಳೂರು 16, ಮಾಜಿ ಸಚಿವ ಜನಾರ್ದನರೆಡ್ಡಿ ಪರ  ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಮಥರ್ಿಸಿಕೊಳ್ಳುತ್ತಿದ್ದಾರೆ. ಅವರಿಂದ ಯಾವ ರೀತಿ ಲಾಭ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಜೆಡಿಎಸ್ ವಕ್ತಾರ ರಮೇಶ್ಬಾಬು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಜನಾರ್ದನರೆಡ್ಡಿ ಅವರಿಂದ ಬಿಜೆಪಿ ನಾಯಕರು ಹಣದ ರೂಪದ ಸಹಾಯ ಪಡೆದಿರುವ ಸಾಧ್ಯತೆ ಇದೆ. ಇದನ್ನು ಖಚಿತ ಪಡಿಸಿದರೆ ಅದರ ಬಗ್ಗೆ ತನಿಖೆ ನಡೆಸುವಂತೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಜನಾರ್ಧನರೆಡ್ಡಿ ಅವರು ಮೊದಲು ನಾಲ್ಕು ವರ್ಷ ಜೈಲಿನಲ್ಲಿದ್ದು ಬಂದಿದ್ದಾರೆ. ಬಳ್ಳಾರಿಗೆ ಕಾಲಿಡದಂತೆ ನಿರ್ಬಂಧ ಹೇರಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಕರ್ಾರದ ದ್ವೇಷದ ರಾಜಕಾರಣ ಮಾಡುತ್ತಿರುವುದಾಗಿ ಜನಾರ್ದನರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಇದು ಸರಿಯಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಜನಾರ್ದನರೆಡ್ಡಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಸಕರ್ಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ. ಇದರ ಬಗ್ಗೆ ಸ್ಪಷ್ಟಪಡಿಸಬೇಕೆಂದು ಅವರು ಒತ್ತಾಯಿಸಿದರು.

ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮೊದಲು ಬಿಜೆಪಿಯವರು ಜನಾರ್ದನರೆಡ್ಡಿ ಅವರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಲಿ. ಅಲ್ಲದೆ ರೆಡ್ಡಿ ಕೂಡ ಉದ್ದಟತನವನ್ನು ಬಿಡಬೇಕೆಂದು ಆಗ್ರಹಿಸಿದರು.

ತಮಗೆ ತಾವು ಪುಣ್ಯಕೋಟಿ ಎಂದು ಬಣ್ಣಿಸಿಕೊಂಡು ಅದರ ಕಥೆ ಹೇಳುತ್ತಾರೆ. ಅವರು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನಿಜವಾದ ಪುಣ್ಯಕೋಟಿ ಎಂದರೆ ಅದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದರು. ಸಕರ್ಾರಕ್ಕೆ ಬದ್ಧತೆ ಇದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ. ಆ್ಯಂಬಿಡೆಂಟ್ ಕಂಪೆನಿ ವಿರುದ್ಧ ಸಕರ್ಾರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.