ಯಾವುದೇ ಆಶೆ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ: ಗಿಡ್ಡಣ್ಣವರ

ಲೋಕದರ್ಶನವರದಿ

ಶಿಗ್ಗಾವಿ05: ಮತದಾನ ಮಾಡುವುದು ಪ್ರತಿಯೋಬ್ಬನಾಗರಿಕನ ಆಧ್ಯ ಕರ್ತವ್ಯವಾಗಿದ್ದು, ಯಾವುದೇ ಆಶೆ ಆಮಿಷಗಳಿಗೆ ಒಳಗಾಗದೇ ಒಳ್ಳೆಯ ಅಭ್ಯಥರ್ಿಗಳಿಗೆ ಮತ ಚಲಾಯಿಸುವಂತೆ    ತಾಲೂಕಿನ ಬಂಕಾಫುರ ಪಟ್ಟಣದಲ್ಲಿ ಕಂದಾಯ ಇಲಾಖೆ ಆಶ್ರಯದಲ್ಲಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ನಡೆದ ಮತದಾನದ ಜನ ಜಾಗೃತಿ ಜಾಥಾವನ್ನುದ್ಧೇಸಿಸಿ ಮಾತನಾಡಿದ ಬಂಕಾಪುರ ಪುರಸಭೆ ಭೂತ ಮಟ್ಟದ ಅಧಿಕಾರಿಗಳಾದ ಬಿ.ಎಸ್.ಗಿಡ್ಡಣ್ಣವರ ಹೇಳಿದರು.

      ಅವರು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ, ಮತದಾನದ ಹಕ್ಕನ್ನು ನೀಡಿದೆ. ಈ ಹಕ್ಕನ್ನು ಕಡ್ಡಾಯವಾಗಿ ಮತ ಚಲಾಯಿಸುವಮೂಲಕ ನಿಮ್ಮ ನಾಯಕನನ್ನು ನಿವೇ ಆಯ್ಕೆ ಮಾಡಿಕೋಳ್ಳಿ. ನಿಮ್ಮ ಪವಿತ್ರವಾದ ಮತವನ್ನು ಹಣ, ಹೆಂಡದ ಆಶೆಗೆ ಮಾರಿಕೋಳ್ಳದೇ ಒಳ್ಳೆಯ ಅಭ್ಯಥರ್ಿಯನ್ನು ಗುರುತಿಸಿ ಮತ ಚಲಾಯಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿ, ಮತದಾನದ ಪ್ರತಿಜ್ಞಾವಿಧಿ ಭೋದಿಸಿದರು.

     ಮತದಾನದ ಜಾಗೃತಿ ಜಾಥಾ ಪುರಸಭೆಯಿಂದ ಪ್ರಾರಂಭಗೊಂಡು ಮುಖ್ಯ ಮಾರುಕಟ್ಟೆ ರಸ್ತೆಗಳಲ್ಲಿ ಸಾಗಿ ವ್ಯಾಪಾರಸ್ತರು, ಗ್ರಾಹಕರು, ರೈತರು, ಸಾರ್ವಜನಿಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ತಪ್ಪದೆ ಮತದಾನ ಮಾಡುವಂತೆ ಸೂಚಿಸಿದರು. ಜಾಥಾ ಸಾಗಿಬಂದು ಬಸ್ ಸ್ಟ್ಯಾಂಡ ತಲುಪಿ ಪ್ರಯಾಣಿಕರಲ್ಲಿಯೂ ಕೂಡಾ ಮತದಾನದ ಬಗ್ಗೆ ತಿಳುವಳಿಕೆ ನೀಡಿ ಏ. 23 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ತಪ್ಪದೇ ಸರ್ವರು ಮತಚಲಾಯಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

    ಕಂದಾಯ ನೀರಿಕ್ಷಕ ಆರ್.ಎಂ.ನಾಯಕ, ಪುರಸಭೆ ಸಿಂಭಂಧಿಗಳಾದ ಬಸವರಾಜ ಗಡಾದ, ಆರ್.ಆರ್.ಚವ್ಹಾಣ, ಮಲ್ಲಮ್ಮ ಹರವಿ, ಗಂಗಾಧರ ಸಾಣಕ್ಯಾನವರ, ಬಿ.ಹೆಚ್.ಕೊರಕಲ್, ನಿರ್ಮಲಾ ಗುಡಿಮನಿ, ಪರಶುರಾಮ ಹೆಬ್ಬಾರ, ನಿಂಗಪ್ಪ ಹೋಸಮನಿ, ಆರ್. ವಿ. ದೇಶಪಾಂಡೆ, ಶಫಿ ಬೈರಕ್ಕದಾರ, ಹೋನ್ನಮ್ಮ ಕೋಳಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.